ಮಲ್ಪೆ, ಸೆ.30: ಮಲ್ಪೆ ಬಂದರಿನಿಂದ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ನಾಪತ್ತೆಯಾದವರನ್ನು ಛತ್ತೀಸಗಡ ಮೂಲದ ದ್ವಾರಿಕ ಶಿಕಾರ್(28) ಎಂದು ಗುರುತಿಸಲಾಗಿದೆ. ಶ್ರೀವೀರಾಂಜನೇಯ ಪರ್ಸಿಯನ್ ಬೋಟ್ ನಲ್ಲಿ ಕೆಲಸ ಮಾಡುತ್ತಿದ್ದ ದ್ವಾರಿಕ ಶಿಕಾರ್ ಸೆ.25ರಂದು ಮಲ್ಪೆ ಬಂದರಿನಿಂದ ಇತರ ಮೀನುಗಾರರೊಂದಿಗೆ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದಜ್ದರು. ಬೆಳಗ್ಗೆ ಇವರು ಅಕಸ್ಮಿಕವಾಗಿ ಬೋಟಿನಿಂದ ಕಾಲುಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor