ಅ.11ರಿಂದ 20: ಕೆಎಸ್ಸಾರ್ಟಿಸಿಯಿಂದ ಪ್ಯಾಕೇಜ್ ಪ್ರವಾಸ
ಉಡುಪಿ, ಸೆ.30: ಕ.ರಾ.ರ.ಸಾ.ನಿಗಮ ಮಂಗಳೂರು ವಿಭಾಗವು ದಸರಾ ಪ್ರಯುಕ್ತ ಉಡುಪಿ ಘಟಕದಿಂದ ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕೆ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಆಯೋಜಿಸಿದ್ದು, ಇದು ಅಕ್ಟೋಬರ್ 11ರಿಂದ 20ರವರೆಗೆ ಕಾರ್ಯಾಚರಿಸಲಿದೆ.
ಪ್ಯಾಕೇಜ್ ಪ್ರವಾಸದ ಮಾರ್ಗ, ವೇಳೆ, ಪ್ರಯಾಣ ದರದ ವಿವರ: ಪ್ಯಾಕೇಜ್ ಪ್ರವಾಸದ ಮಾರ್ಗದ ಬಸ್‌ಗಳು ಬೆಳಗ್ಗೆ 7:30ಕ್ಕೆ ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಹೊರಟು ಕೊಡ್ಯಡ್ಕ ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನ- ಶೃಂಗೇರಿ ಶ್ರೀಶಾರದಾಂಬ ದೇವಸ್ಥಾನ, ವಯಾ ಎಸ್.ಕೆ. ಬಾರ್ಡರ್, ಋಷ್ಯಶೃಂಗೇಶ್ವರ ದೇವಸ್ಥಾನ ಕಿಗ್ಗ ಕ್ಷೇತ್ರ- ಹರಿಹರಪುರ ಮಠ - ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನಕ್ಕೆ ಭೇಟಿ ನೀಡಿ ರಾತ್ರಿ 8 ಗಂಟೆಗೆ ಉಡುಪಿ ನಗರ ಸಾರಿಗೆ ಬಸ್ಸು ನಿಲ್ದಾಣ ತಲುಪಲಿದೆ.
ಪ್ಯಾಕೇಜ್ ಪ್ರವಾಸದ ಮತ್ತೊಂದು ಮಾರ್ಗದ ಬಸ್‌ಗಳು ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 7:30ಕ್ಕೆ ಹೊರಟು ನೀಲಾವರ ಶ್ರೀ ಮಷಮರ್ಧಿನಿ ದೇವಸ್ಥಾನ, ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಶ್ರೀಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ, ಸೌಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಶ್ರೀಮುಕಾಂಬಿಕಾ ದೇವಸ್ಥಾನ ಹಾಗೂ ಮಾರಣಕಟ್ಟೆ ಶ್ರೀಬ್ರಹ್ಮಲಿಂಗೇಶ್ವರ ದೇವಸ್ಥಾನವನ್ನು ಸಂದರ್ಶಿಸಿ ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಸಂಜೆ 6:30ಕ್ಕೆ ಮರಳಲಿದೆ. ಎರಡು ಮಾರ್ಗಗಳ ಪ್ಯಾಕೇಜ್ ಪ್ರವಾಸಕ್ಕೆ ವಯಸ್ಕರಿಗೆ ರೂ.500 ಹಾಗೂ ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) ರೂ.400 ದರ ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಡುಪಿ ಘಟಕ ವ್ಯವಸ್ಥಾಪಕರು ದೂ.ಸಂಖ್ಯೆ: 7760995407, ಉಡುಪಿ ಘಟಕ- ದೂ.ಸಂಖ್ಯೆ: 7760994451, ಉಡುಪಿ ಮುಂಗಡ ಬುಕ್ಕಿಂಗ್ ಕೌಂಟರ್ ದೂ.ಸಂಖ್ಯೆ: 9663266400 ಹಾಗೂ ಸದರಿ ಪ್ಯಾಕೇಜ್ ಪ್ರವಾಸಕ್ಕೆ ಮುಂಗಡ ಆಸನ ಕಾಯ್ದಿರಿಸಲು ವ್ಯವಸ್ಥೆ ಮಾಡಲಾಗಿದ್ದು, ಸದರಿ ಸಾರಿಗೆಗಳ ಸದುಪ ಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದು ಮಂಗಳೂರು ಕ.ರಾ.ರ.ಸಾ.ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.