ಉಡುಪಿ: ಎಸ್‌ಐಆರ್‌ನ ಡಿಜಿಟಲೀಕರಣ ಕಾರ್ಯ ಶೇ.100 ಮುಕ್ತಾಯ
ಒಟ್ಟು 64,201 ಮಂದಿಯ ಹೆಸರು ಪಟ್ಟಿಯಿಂದ ಹೊರಗೆ
ಉಡುಪಿ, ಆ.6: ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಮುಕ್ತಾಯಗೊಂಡಿದೆ. ಬಾಕಿ ಉಳಿದಿದ್ದ 14 ಗಣತಿ ನಮೂನೆಗಳ ಡಿಜಟಲೀಕರಣ ಇಂದು ನಡೆಯುವ ಮೂಲಕ ಜಿಲ್ಲೆಯಲ್ಲಿ ಒಟ್ಟು 9,99,675 ಎನ್ಯೂಮರೇಷನ್ ಫಾರಂಗಳ ಡಿಜಿಟಲೀಕರಣ ಕಾರ್ಯ ಮುಕ್ತಾಯಗೊಂಡಿದೆ.
ಜಿಲ್ಲೆಯಲ್ಲಿ ಒಟ್ಟು 10,63,876 ಮತದಾರರಿದ್ದು, ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಎಲ್ಲರಿಗೂ ಗಣತಿ ಫಾರಂನ್ನು ವಿತರಿಸಿದ್ದರು. ಇವರಲ್ಲಿ 9,99,675 ಮಂದಿಯ ಗಣತಿ ನಮೂನೆ ಇದೀಗ ಡಿಜಿಟಲೀಕರಣ ಗೊಳ್ಳುವ ಮೂಲಕ ಶೇ.100 ಸಾಧನೆ ಮಾಡಲಾಗಿದೆ. ಉಳಿದ ಒಟ್ಟು 64,201 ಮಂದಿಯ ಹೆಸರನ್ನು ವಿವಿಧ ಕಾರಣಗಳಿ ಗಾಗಿ (ಎಎಸ್‌ಡಿಡಿಒ) ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ. ಇವರಲ್ಲಿ ಮೃತರು, ಸ್ಥಳಾಂತರಗೊಂಡವರು, ದ್ವಿಪ್ರತಿ ಸಲ್ಲಿಸಿದವರು ಹಾಗೂ ಗೈರಾದವರು ಸೇರಿದ್ದಾರೆ.
ಜಿಲ್ಲೆಯ ಒಟ್ಟು 10,63,876 ಮತದಾರರ ಪೈಕಿ ಶೇ. 93.97 ಮಂದಿಯ ಅಂದರೆ 9,99,675 ಮಂದಿಯ ಗಣತಿ ನಮೂನೆ ಡಿಜಿಟಲೀಕರಣ ವಾಗಿದ್ದರೆ, ಶೇ.6.03 ಮಂದಿಯ ಅಂದರೆ 64,201ಯ ಹೆಸರು ಪಟ್ಟಿಯಿಂದ ಹೊರ ಬೀಳಲಿದೆ. ಈ ಮೂಲಕ ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಸಂಪೂರ್ಣಗೊಂಡಂತಾಗಿದೆ.
ಉಡುಪಿ ಜಿಲ್ಲೆಯಲ್ಲಿ 35,044 (ಶೇ.3.29) ಮಂದಿಯ ಮ್ಯಾಪಿಂಗ್ ಆಗಿಲ್ಲ. ಇವರೆಲ್ಲರ ಹೆಸರನ್ನು ಶೀಘ್ರವೇ ಪ್ರಕಟಗೊಳ್ಳುವ ಕರಡು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ. ಇನ್ನು 4,68,625(ಶೇ.44.05) ಮಂದಿ ಸ್ವಯಂ ಮ್ಯಾಪಿಂಗ್ ಆಗಿದ್ದರೆ, 4,95,892 (ಶೇ.46.61) ಮಂದಿಯ ಮ್ಯಾಪಿಂಗ್ ವಂಶಸ್ಥರ ಮೂಲಕ ಆಗಿದೆ.