ಗುತ್ತಿಗೆದಾರರಿಗೆ 94.81 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಉಡುಪಿ, ಆ.6: ರೈಲ್ವೆ ಕಾಮಗಾರಿಯ ಲಕ್ಷಾಂತರ ರೂ. ಗುತ್ತಿಗೆ ಹಣವನ್ನು ನೀಡದೆ ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್‌ನಿಂದ ಪಿ.ರಾಮಚಂದ್ರ ಅವರಿಗೆ ಕುಮುಟಾ ಮತ್ತು ಗೋಕರ್ಣ ರೈಲ್ವೆ ಕಾಮಗಾರಿ ಮಂಜೂರಾಗಿದ್ದು ಆ ಕಾಮಗಾರಿಗಳನ್ನು ಪಿ.ರಾಮಚಂದ್ರ ಗುತ್ತಿಗೆ ಉಪಗುತ್ತಿಗೆ ಅಧಾರದ ಮೇಲೆ ಉಡುಪಿ ಕನ್ನರ್ಪಾಡಿಯ ಗುತ್ತಿಗೆದಾರ ಹೃಷಿಕೇಶ್ ಜೆ.ಶೆಟ್ಟಿಗೆ ನೀಡಿದ್ದರು.
ಹೃಷಿಕೇಶ್ ಜೆ.ಶೆಟ್ಟಿ ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರ ರಾಮಚಂದ್ರರವರು ಹಣವನ್ನು ಒಪ್ಪಂದದ ಪ್ರಕಾರ ಪಾವತಿಸುವುದಾಗಿ ಭರವಸೆ ನೀಡಿದ್ದು, ಅದರಂತೆ ಹೃಷಿಕೇಶ್ ಜೆ.ಶೆಟ್ಟಿ ಒಪ್ಪಂದಕ್ಕೆ ಸಹಿ ಹಾಕಿದ್ದರು. 2025ರ ಅಕ್ಟೋಬರ್‌ನಲ್ಲಿ ಕಾಮಗಾರಿಯನು ಪ್ರಾರಂಭಿಸಿದ್ದು, ಕುಮಟಾ ಹಾಗೂ ಗೋಕರ್ಣ ಕಾಮಗಾರಿಗಳು ಪ್ರಗತಿಯಲ್ಲಿದ್ದ ಸಂದರ್ಭದಲ್ಲಿ ಗೋಕರ್ಣ ರೈಲ್ವೆ ನಿಲ್ದಾಣ ಮತ್ತು ಮಡ್‌ಗಾಂ ರಬ್ಬ್ರೈೆಸ್ಡ್ ಲೆವೆಲ್ ಕ್ರಾಸಿಂಗ್ ಪ್ಯಾಡ್‌ಗಳ ಹೆಚ್ಚುವರಿ ಕಾಮಾಗಾರಿಗಳನ್ನು ಸಹ ನೀಡಿದ್ದರು.
ಹೃಷಿಕೇಶ್ ಜೆ.ಶೆಟ್ಟಿ ಸ್ವಂತ ಹಣ ಕಾರ್ಮಿಕರನ್ನು ಯಂತ್ರೋಪಕರಣಗಳನ್ನು ಸಾಮಗ್ರಿಗಳು ಹಾಗೂ ಇತರ ಸಂಪನ್ಮೂಲಗಳನ್ನು ಬಳಸಿಕೊಂಡು ಕಾಮಾಗಾರಿಯನ್ನು ಪೂರ್ಣಗೊಳಿಸಿದ್ದು ಪಿ.ರಾಮಚಂದ್ರ ಒಪ್ಪಂದಂತೆ 94,81,554ರೂ. ಹಣ ಕೊಡುವುದಾಗಿ ನಂಬಿಸಿ ಕಾಮಗಾರಿ ಮುಗಿದ ಬಳಿಕ ಹಣವನ್ನು ಪಾವತಿಸದೆ ಆರ್ಥಿಕ ನಷ್ಟ ಉಂಟು ಮಾಡಿ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.