ಉಡುಪಿ: ಅಕ್ರಮ ಸಕ್ರಮ ಯೋಜನೆಯಲ್ಲಿ 35159 ಅರ್ಜಿ ತಿರಸ್ಕಾರ
ಉಡುಪಿ, ಆ.6: ಅಕ್ರಮ-ಸಕ್ರಮ ಯೋಜನೆಗಳಡಿ ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 38506 ಮತ್ತು ನಗರ ಪ್ರದೇಶಗಳಲ್ಲಿ 11045 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಸೂಕ್ತ ದಾಖಲೆಗಳ ಕೊರತೆ ಹಿನ್ನಲೆಯಲ್ಲಿ 94ಸಿ 27,528 ಹಾಗೂ 94ಸಿಸಿ 7631 ಅರ್ಜಿಗಳು ತಿರಸ್ಕೃತಗೊಂಡಿವೆ.
ಗ್ರಾಮೀಣ ಭಾಗದಲ್ಲಿ(94ಸಿ) 10742 ಮಂದಿಗೆ ಹಕ್ಕುಪತ್ರ ಮಂಜೂರಾಗಿದ್ದು, 10514 ಮಂದಿಗೆ ಈಗಾಗಲೇ ಹಕ್ಕುಪತ್ರ ವಿತರಿಸಲಾಗಿದೆ. 228 ಮಂದಿಗೆ ಹಕ್ಕುಪತ್ರ ನೀಡಬೇಕಾಗಿದೆ. 236 ಅರ್ಜಿಗಳು ಬಾಕಿ ಉಳಿದಿದ್ದು, ಇವುಗಳಲ್ಲಿ 159 ಅರ್ಜಿಗಳು ತನಿಖಾ ಹಂತದಲ್ಲಿವೆ. 46 ಅರ್ಜಿಗಳು ಡೀಮ್ಡ್ ಫಾರೆಸ್ಟ್ ಪಟ್ಟಿಯಲ್ಲಿವೆ.
ಕುಂದಾಪುರ ತಾಲೂಕಿನಲ್ಲಿ ಗರಿಷ್ಠ 11,579 ಅರ್ಜಿಗಳು ಹಾಗೂ ಕಾಪು ತಾಲೂಕಿನಲ್ಲಿ ಅತ್ಯಂತ ಕಡಿಮೆ 1,308 ಅರ್ಜಿಗಳು ಸಲ್ಲಿಕೆಯಾಗಿವೆ. ಬೈಂದೂರು ತಾಲೂಕಿನಲ್ಲಿ 138 ಅರ್ಜಿಗಳು ಬಾಕಿ ಉಳಿದು ಕೊಂಡಿವೆ.
ನಗರ ಪ್ರದೇಶದಲ್ಲಿ(94ಸಿಸಿ) 3,183 ಅರ್ಜಿಗಳು ಮಂಜೂರಾಗಿದ್ದು, 3086 ಮಂದಿಗೆ ಹಕ್ಕುಪತ್ರ ನೀಡಲಾಗಿದೆ. 97 ಮಂದಿಗೆ ಹಕ್ಕುಪತ್ರ ವಿತರಿಸಬೇಕಾಗಿದೆ. 231 ಅರ್ಜಿಗಳು ಬಾಕಿ ಉಳಿದಿದ್ದು, 203 ಅರ್ಜಿಗಳು ತನಿಖಾ ಹಂತದಲ್ಲಿ ಮತ್ತು 17 ಅರ್ಜಿಗಳು ಅರಣ್ಯ ಇಲಾಖೆ ಡೀಮ್ಡ್ ಪಟ್ಟಿಯಲ್ಲಿವೆ.
ತಾಲೂಕುವಾರು ವಿವರ: 94ಸಿ (ಗ್ರಾಮೀಣ) ಉಡುಪಿ ತಾಲೂಕು: 3570 ಅರ್ಜಿ ಸಲ್ಲಿಕೆ, 397 ಮಂಜೂರಾತಿ, 3167 ತಿರಸ್ಕೃತಗೊಂಡಿದೆ. ಕುಂದಾಪುರ: 11579 ಸಲ್ಲಿಕೆ, 4134 ಮಂಜೂರು, 7445 ತಿರಸ್ಕಾರ. ಕಾರ್ಕಳ: 6103 ಸಲ್ಲಿಕೆ, 1367 ಮಂಜೂರು, 4707 ತಿರಸ್ಕಾರ. ಬೈಂದೂರು: 6985 ಸಲ್ಲಿಕೆ, 2109 ಮಂಜೂರು, 4738 ತಿರಸ್ಕಾರ. ಹೆಬ್ರಿ: 3055 ಸಲ್ಲಿಕೆ, 676 ಮಂಜೂರು, 2345 ತಿರಸ್ಕಾರ. ಬ್ರಹ್ಮಾವರ: 5906 ಸಲ್ಲಿಕೆ, 1465 ಮಂಜೂರು, 4412 ತಿರಸ್ಕಾರ. ಕಾಪು: 1308 ಸಲ್ಲಿಕೆ, 594 ಮಂಜೂರು, 714 ತಿರಸ್ಕಾರ.
94ಸಿಸಿ(ನಗರ) ಉಡುಪಿ: 3501 ಸಲ್ಲಿಕೆ, 860 ಮಂಜೂರು, 2628 ತಿರಸ್ಕಾರ. ಕುಂದಾಪುರ: 164 ಸಲ್ಲಿಕೆ, 6 ಮಂಜೂರು, 158 ತಿರಸ್ಕಾರ. ಕಾರ್ಕಳ: 3776 ತಿರಸ್ಕಾರ, 1213 ಮಂಜೂರು, 2546 ತಿರಸ್ಕಾರ. ಬೈಂದೂರು: 351 ಸಲ್ಲಿಕೆ, 19 ಮಂಜೂರು, 148 ತಿರಸ್ಕಾರ. ಬ್ರಹ್ಮಾವರ: 2334 ಸಲ್ಲಿಕೆ, 886 ಮಂಜೂರು, 1431 ತಿರಸ್ಕಾರ. ಕಾಪು ತಾಲೂಕಿನಲ್ಲಿ 919 ಅರ್ಜಿ ಸಲ್ಲಿಕೆಯಾಗಿದ್ದು, 199 ಮಂಜೂರಾತಿ ಹಾಗೂ 720 ತಿರಸ್ಕೃತಗೊಂಡಿದೆ.