ಅಪಾಯಕಾರಿ ರೀಲ್ಸ್: ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲು

Update: 2026-08-06 21:04 IST

ಮಣಿಪಾಲ, ಆ.6: ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ಎಂಬಂತೆ ಬುಲೆಟ್‌ನಿಂದ ಜಂಪ್ ಮಾಡಿ ರೀಲ್ಸ್ ಮಾಡಿದ ಸವಾರನ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.1ರಂದು ಪೆರಂಪಳ್ಳಿಯ ಸಾಯಿರಾಧ ವಿಲ್ಲಾದ ಎದುರು ಹಾದು ಹೋಗಿರುವ ಮಣಿಪಾಲ -ಅಂಬಾಗಿಲು ಸಾರ್ವಜ ನಿಕ ರಸ್ತೆಯಲ್ಲಿ ಮೋಹಿತ್ ಸ್ವರೂಪ್(31) ಎಂಬಾತ ತನ್ನ ಬುಲೆಟ್‌ನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಅಂಬಾಗಿಲು ಕಡೆಯಿಂದ ಮಣಿಪಾಲ ಕಡೆಗೆ ಅಪಾಯಕಾರಿಯಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದಿದ್ದು, ನಂತರ ಸಾರ್ವಜನಿಕ ರಸ್ತೆಯಲ್ಲಿ ಒಮ್ಮೇಲೆ ಬುಲೆಟ್‌ನಿಂದ ಜಂಪ್ ಮಾಡಿ ಹಾರಿಸಿದ ಬಗ್ಗೆ ಸಾಮಾಜಿಕ ಜಾಲತಾಣ ಗಳಲ್ಲಿ ರೀಲ್ಸ್ ಹರಿದಾಡುತ್ತಿರುವುದು ಕಂಡುಬಂದಿದೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News