×
Ad

ಮಹಿಳೆಗೆ 11.61ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

Update: 2025-07-18 20:43 IST

ಉಡುಪಿ, ಜು.18: ಮಹಿಳೆಯೊಬ್ಬರಿಗೆ ಆನ್‌ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಹಾಸಿನಿ ಎಂಬವರಿಗೆ ಅಪರಿಚಿತರು ವಾಟ್ಯಾಪ್ ಮೂಲಕ ಸಂದೇಶ ಕಳುಹಿಸಿದ್ದು, ಕೆಲಸ ಹುಡುಕುವ ಬಗ್ಗೆ ಮಾಹಿತಿ ಪಡೆದಿದ್ದರು. ನಂತರದಲ್ಲಿ ಅಪರಿಚಿತರು ಟೆಲಿಗ್ರಾಂ ಗ್ರೂಪ್‌ಗೆ ಸೇರುವಂತೆ ಸುಹಾಸಿನಿಗೆ ಲಿಂಕ್ ಕಳುಹಿಸಿ ಕೊಟಿದ್ದರು. ಅದನ್ನು ನಂಬಿದ ಅವರು ಒಟ್ಟು 11,61,256ರೂ. ಹೂಡಿಕೆ ಮಾಡಿದ್ದು, ಬಳಿಕ ಆರೋಪಿಗಳು ಹೂಡಿಕೆ ಮಾಡಿದ ಹಣವನ್ನಾಗಲಿ ಲಾಭಾಂಶವನ್ನಾಗಲಿ ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News