×
Ad

ಕ್ಯುಸಿಐ ಮೌಲ್ಯಾಂಕನದಲ್ಲಿ ಎಸ್‌ಡಿಎಂಗೆ ದೇಶದಲ್ಲೇ 2ನೇ ಸ್ಥಾನ

Update: 2024-10-28 21:14 IST

ಉಡುಪಿ: ಉದ್ಯಾವರ ಸಮೀಪದ ಕುತ್ಪಾಡಿಯಲ್ಲಿರುವ ಎಸ್‌ಡಿಎಂ ಆಯುರ್ವೇದ ಕಾಲೇಜ್, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು ನೇಶನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ (ಎಸ್‌ಸಿಐಎಸ್‌ಎಂ) ನಡೆಸಿದ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಕ್ಯುಸಿಐ) ಮೌಲ್ಯಾಂಕನದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದೆ.

ಕ್ಯುಸಿಐ ಮೌಲ್ಯಾಂಕನವು ಶೈಕ್ಷಣಿಕ ಮೂಲಸೌಕರ್ಯ, ಅಧ್ಯಾಪಕರ ಅರ್ಹತೆಗಳು, ವಿದ್ಯಾರ್ಥಿಗಳ ಕಾರ್ಯಕ್ಷಮತೆ ಹಾಗೂ ಓಧನೆ ಮತ್ತು ಕಲಿಕೆಯಲ್ಲಿ ನಾವಿನ್ಯ ಅಭ್ಯಾಸಗಳು ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡುತ್ತದೆ.ದೇಶವು ಹಲವು ಪ್ರಮುಖ ವಿದ್ಯಾಸಂಸ್ಥೆಗಳ ನಡುವೆ ರಾಷ್ಟ್ರೀಯ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿರುವುದು ಎಸ್‌ಡಿಎಂ ಸಂಸ್ಥೆಯ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವ ವನ್ನು ಎತ್ತಿ ತೋರಿಸುತ್ತದೆ ಎಂದು ಎಸ್‌ಡಿಎಂ ಕಾಲೇಜಿನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News