×
Ad

ಪರಶುರಾಮ ಥೀಮ್ ಪಾರ್ಕ್ ಬಗ್ಗೆ ಸಲ್ಲಿಸಿರುವ ಪಿ ಐ ಎಲ್ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿಗೆ ಮನವಿ: ಉಮೇಶ್ ಕಲ್ಲೊಟ್ಟೆ

Update: 2025-08-16 21:55 IST

ಉಮೇಶ್ ಕಲ್ಲೊಟ್ಟೆ

ಕಾರ್ಕಳ : ಪರಶುರಾಮ ಥೀಮ್ ಪಾರ್ಕ್ ನಲ್ಲಿ ಹೊಸ ಕಂಚಿನ ಪರಶುರಾಮ ಮೂರ್ತಿಯನ್ನು ನಿರ್ಮಿಸಲು ತಮ್ಮ ಸಹಿತ ಬೇರೆ ಇಲಾಖಾ ಮುಖ್ಯಸ್ಥರನ್ನು ಪಕ್ಷಕಾರರನ್ನಾಗಿಸಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿರುತ್ತದೆ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಸೂಕ್ತ ತನಿಖೆ ನಡೆಸುವಂತೆ ಸಮಾಜ ಸೇವಕ, ಮಾಹಿತಿ ಹಕ್ಕು ಕಾರ್ಯಕರ್ತ ಉಮೇಶ್ ಕಲ್ಲೊಟ್ಟೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಪರಶುರಾಮ ಥೀಮ್ ಪಾರ್ಕ್ ಗೆ ಹೋಗಲು ಕಾಂಕ್ರೀಟ್ ರಸ್ತೆಗೆ ಬಿಲ್ಲು ಬಿಡುಗಡೆಯಾಗಲು ಬಾಕಿ ಇರುತ್ತದೆ. ಪರಶುರಾಮ ಥೀಮ್ ಪಾರ್ಕ್ ಗೆ ಹೋಗಲು ಕಾಂಕ್ರೀಟ್ ರಸ್ತೆಗೆ ಯಾವುದೇ ಇಲಾಖೆಯಿಂದ ಅನುಮತಿ ಪಡೆಯದೇ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಿಸದ ಗುತ್ತಿಗೆದಾರರಿಗೆ ಬಿಲ್ಲು ಬಿಡುಗಡೆಯಾಗದೆ ಬಾಕಿ ಇರುತ್ತದೆ. ಕಾಂಕ್ರೀಟ್ ರಸ್ತೆ ಅಕ್ರಮವಾಗಿ ಹಣ ಬಳಕೆಯಾಗಿರುವ ಬಗ್ಗೆ GST ಮತ್ತು IT ಇಲಾಖೆಯಿಂದ ತನಿಖೆಯಾಗಬೇಕು. ಹೊಸ ಕಂಚಿನ ಪರಶುರಾಮ ಮೂರ್ತಿಯನ್ನು ನಿರ್ಮಿಸಲು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಗೆ ಮತ್ತು ಸದ್ರಿ ಕಾಂಕ್ರೀಟ್ ರಸ್ತೆಗೆ ಹಣವನ್ನು ಬಿಡುಗಡೆ ಮಾಡಲು ಸಂಬಂಧ ಇರುವ ಬಗ್ಗೆ ತಾವು ಸರಕಾರಕ್ಕೆ ಪತ್ರವನ್ನು ಬರೆದು ಯಾವುದೇ ಹಣವನ್ನು ಬಿಡುಗಡೆ ಮಾಡಬಾರದು. ಇದ್ದು ಪರಶುರಾಮ ಮೂರ್ತಿಗೆ ಸರಕಾರದಿಂದ ಶಿಲ್ಪಿಗೆ ಬಿಡುಗಡೆಯಾಗಿರುವ ಹಣವನ್ನು ವಸೂಲು ಮಾಡಲು ಕ್ರಮವನ್ನು ಕೈಗೊಳ್ಳಬೇಕೇ ಹೊರತು ಪುನಃ ಸರಕಾರದಿಂದ ಹಣ ಬಿಡುಗಡೆ ಮಾಡಿ ಪರಶುರಾಮ ಮೂರ್ತಿಯನ್ನು ನಿರ್ಮಿಸುವುದು ಕಾನೂನು ಬಾಹಿರವಾಗಿರುತ್ತದೆ ಹಾಗೂ ಈ ಬಗ್ಗೆ ತಾವು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News