ಮೇ 21ರಂದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ
Update: 2025-05-19 19:57 IST
ಉಡುಪಿ, ಮೇ 19: ಹಾಲಾಡಿ ಸರ್ಕಲ್‌ನಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಸಂಬಂಧ ಮೇ 21ರಂದು ಮೆಸ್ಕಾಂ ಇಲಾಖೆಯ ಹಾಲಾಡಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಫ್-11 ಸಿಎಂಸಿ ಉಡುಪಿ ವರ್ಸಸ್ ವಿದ್ಯುತ್ ಮಾರ್ಗವನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸ ಬೇಕಾಗಿದೆ.
ಈ ಹಿನ್ನೆಲೆ, ಮೇ 21ರಂದು ವಾರಾಹಿಯಿಂದ ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.