×
Ad

ಉಡುಪಿಯಲ್ಲಿ ವಿ.ಕೆ. ಫನೀರ್ಚರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ನೂತನ ಮಳಿಗೆ ಶುಭಾರಂಭ

Update: 2026-07-04 18:38 IST

ಉಡುಪಿ, ಜು.4: ಫನೀರ್ಚರ್ ಮತ್ತು ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ವಿಶ್ವಾಸದ ಪ್ರತೀಕವಾಗಿ ಗುರುತಿಸಿಕೊಂಡಿರುವ ವಿ.ಕೆ.ಫನೀರ್ಚರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇದರ ಸರ್ವ ಸುಸಜ್ಜಿತ ಭವ್ಯವಾದ ಶೋರೂಂ ಶನಿವಾರ ಉಡುಪಿಯ ಕಡಿಯಾಳಿಯಲ್ಲಿ ಶುಭಾರಂಭಗೊಂಡಿತು.

ವಿ.ಕೆ. ಫನೀರ್ಚರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇದರ ಆರನೇ ಮಳಿಗೆಯನ್ನು ಉದ್ಘಾಟಿಸಿದ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವಿಕೆ ವಿಶ್ವಾಸಾರ್ಹ ಮತ್ತು ಗ್ರಾಹಕರಿಗೆ ನಂಬಿಕೆ ಪ್ರತೀಕವಾ ಗಿರುವ ಸಂಸ್ಥೆಯಾಗಿದ್ದು, ಹಲವು ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಯಲ್ಲೂ ಕೈಜೋಡಿಸಿದೆ. ಶ್ರಮ ವಹಿಸಿದರೆ ಯಶಸ್ಸು ಸಾಧ್ಯ ಎಂಬುದಕ್ಕೆ ಈ ಸಂಸ್ಥೆಯೇ ಸಾಕ್ಷಿ. ಮುಂದೆ ಇನ್ನಷ್ಟು ಮಳಿಗೆಗಳು ತೆರೆಯಲಿ ಎಂದು ಹಾರೈಸಿದರು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಉಡುಪಿ ಹಾಗೂ ಮಣಿಪಾಲ ಇಂದು ಅತೀ ವೇಗದಲ್ಲಿ ಬೆಳೆಯುತ್ತಿರುವ ನಗರ ಆಗಿದೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಉಡುಪಿಯ ಮುಕುಟಕ್ಕೆ ವಿಕೆ ಫನೀರ್ಚರ್ಸ್‌ ಆ್ಯಂಡ್ ಇಲೆಕ್ಟ್ರಾನಿಕ್ಸ್ ಇನ್ನೊಂದು ಗರಿಯಾಗಿದೆ. ಇನ್ನಷ್ಟು ಶಾಖೆಗಳು ಆರಂಭಿಸಿ ಗ್ರಾಹಕರ ಮನಸ್ಸು ಗೆಲ್ಲುವ ಕಾರ್ಯ ಆಗಬೇಕು ಎಂದು ತಿಳಿಸಿದರು.

ಸಾಯಿ ರಾಧಾ ಗ್ರೂಪ್ ಉಡುಪಿ ಇದರ ಅಧ್ಯಕ್ಷ ಮನೋಹರ್ ಶೆಟ್ಟಿ ಮಾತನಾಡಿ, ಉದ್ಯಮದಲ್ಲಿ ಎಷ್ಟು ಹಣ ಮಾಡಿದರೆಂಬುದಕ್ಕಿಂತ ಎಷ್ಟು ಜನರಿಗೆ ಉದ್ಯೋಗ ನೀಡಿದರು ಎಂಬುದು ಮುಖ್ಯವಾಗುತ್ತದೆ. ಆ ಕೆಲಸ ವನ್ನು ಈ ಸಂಸ್ಥೆ ಮಾಡಿದೆ. ಉಡುಪಿಯಲ್ಲಿ ಹಲವು ಇಂಜಿನಿಯರ್ ಕಾಲೇಜುಗಳಿದ್ದು, ವರ್ಷಕ್ಕೆ ನೂರಾರು ವಿದ್ಯಾರ್ಥಿಗಳು ಹೊರ ಬರುತ್ತಿದ್ದಾರೆ. ಹಾಗಾಗಿ ಇಲ್ಲಿ ಐಟಿ ಪಾರ್ಕ್ ಸ್ಥಾಪಿಸಬೇಕಾಗಿರುವುದು ಇಂದಿನ ಅಗತ್ಯ ವಾಗಿದೆ ಎಂದು ಹೇಳಿದರು.

ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಾಲ, ಉಜ್ವಲ್ ಡೆವಲಪರ್ಸ್‌ನ ಆಡಳಿತ ನಿರ್ದೇಶಕ ಅಜಯ್ ಪಿ.ಶೆಟ್ಟಿ, ಉದ್ಯಮಿ ಕೆ.ಎಂ.ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರವರ್ತಕ ವಿಠಲ್ ಕುಲಾಲ್, ವಿನುತಾ ವಿಠಲ್ ಕುಲಾಲ್ ಹಾಜರಿದ್ದರು. ಚೇತನ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಸಮಾರಂಭದ ಪ್ರಯುಕ್ತ ಉಡುಪಿಯ ವಿಕೆ ಫರ್ನಿಚರ್ಸ್‌ ಆ್ಯಂಡ್ ಎಲೆಕ್ಟ್ರಾನಿಕ್ಸ್‌ನಲ್ಲಿ ‘ವಿಸಿಟ್ ಆ್ಯಂಡ್ ವಿನ್’ ಕಾಶ್ಮಿರ ಪ್ರವಾಸ ಗೆಲ್ಲುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ಘೋಷಿಸಿದೆ. ಇಲ್ಲಿ ಮನೆ ಹಾಗೂ ಕಚೇರಿಗೆ ಬೇಕಾದ ಗುಣಮಟ್ಟದ ಫನಿರ್ಚರ್, ಹೋಮ್ ಮತ್ತು ಆಫೀಸ್ ಇಂಟೀರಿಯನ್ಸ್, ಡೆಕೋರೆಟಿವ್ ಹಾಗೂ ಫರ್ನಿಶಿಂಗ್ ಉತ್ಪನ್ನಗಳು, ಟೆಲಿವಿಷನ್‌ಗಳು, ಗೃಹೋಪಯೋಗಿ ವಿದ್ಯುತ್ ಉಪಕರಣಗಳು, ಮೊಬೈಲ್ ಗಳು, ಲ್ಯಾಪ್‌ಟಾಪ್‌ ಗಳು ಹಾಗೂ ಕಿಚನ್‌ವೇರ್ ಸೇರಿದಂತೆ ಎಲ್ಲ ರೀತಿಯ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯ ಇದೆ ಎಂದು ಸಂಸ್ಥೆಯ ಪ್ರವರ್ತಕ ವಿಠಲ್ ಕುಲಾಲ್ ತಿಳಿಸಿದ್ದಾರೆ.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News