×
Ad

ಉಡುಪಿ: ಆ.28ರಂದು ಅದಿತಿ ನಾಯಕ್‌ರಿಂದ ನೃತ್ಯಾರ್ಪಣ

Update: 2025-08-26 21:41 IST

ಉಡುಪಿ, ಆ.26: ಉಡುಪಿಯ ರಾಧಾಕೃಷ್ಣ ನೃತ್ಯ ನಿಕೇತನದ ನೃತ್ಯಗುರು ವಿದುಷಿ ವೀಣಾ ಎಂ.ಸಾಮಗರ ಬಳಿ ಕಳೆದ 15 ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿರುವ ಅದಿತಿ ಜಿ.ನಾಯಕ್ ಇವರ ನೃತ್ಯಾರ್ಪಣ ಕಾರ್ಯಕ್ರಮ ಆ.28ರ ಗುರುವಾರ ಸಂಜೆ 5:15ಕ್ಕೆ ಐವೈಸಿ ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿದುಷಿ ವೀಣಾ ಸಾಮಗ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಎಚ್.ಗಣೇಶ್ ನಾಯಕ್ ಹಾಗೂ ಲಕ್ಷ್ಮೀ ಜಿ.ನಾಯಕ್ ದಂಪತಿ ಪುತ್ರಿಯಾಗಿರುವ ಅದಿತಿ ನಾಯಕ್ ಏಕಾಂಗಿಯಾಗಿ ಈ ಕಾರ್ಯಕ್ಮ ನೀಡಲಿದ್ದಾರೆ ಎಂದರು.

ಕಾರ್ಯಕ್ರಮವನ್ನು ಉಡುಪಿಯ ಸ್ಕೌಟ್ ಆಯುಕ್ತ ಜನಾರ್ದನ ಕೊಡವೂರು ಉದ್ಘಾಟಿಸಲಿದ್ದಾರೆ. ಮಂಗಳೂರಿನ ಸೌರಭ ಕಲಾ ಪರಿಷತ್‌ನ ನಿರ್ದೇಶಕಿ ಡಾ.ಶ್ರೀವಿದ್ಯಾ ಭಾಗವಹಿಸಲಿದ್ದಾರೆ ಎಂದರು.

ಅದಿತಿ ನಾಯಕ್ ತಮ್ಮ ಒಂದೂವರೆ ಗಂಟೆಗಳ ನೃತ್ಯಾರ್ಪಣ ಕಾರ್ಯಕ್ರಮದಲ್ಲಿ ಭರತನಾಟ್ಯ ಹಾಗೂ ಕೂಚುಪುಡಿ ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಮೃದಂಗದಲ್ಲಿ ಮಂಗಳೂರಿನ ವಿದ್ವಾನ್ ಮನೋಹರ ರಾವ್, ವಯಲಿನ್‌ನಲ್ಲಿ ವಿದ್ವಾನ್ ಶ್ರೀಧರ ಆಚಾರ್ಯ ಹಾಗೂ ಕೊಳಲಿನಲ್ಲಿ ಡಾ.ಬಾಲಕೃಷ್ಣ ಮಣಿಪಾಲ ಸಹಕರಿಸಲಿದ್ದಾರೆ ಎಂದು ವೀಣಾ ಎಂ.ಸಾಮಗ ತಿಳಿಸಿದರು.

ಶಿಷ್ಯೆ ಅದಿತಿ ಜಿ.ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News