ವಕ್ವಾಡಿ: 3 ರಿಂದ 5 ವರ್ಷದ ಮಕ್ಕಳಿಗೆ ಉಚಿತ ವಾಕ್ ಮತ್ತು ಶ್ರವಣ ಪರೀಕ್ಷಾ ಶಿಬಿರ
ಕುಂದಾಪುರ: ವಕ್ವಾಡಿ ಫ್ರೆಂಡ್ಸ್(ರಿ) ವಕ್ವಾಡಿ ಮತ್ತು ನಿಟ್ಟೆ ಸಂಸ್ಥೆ ದೇರಳಕಟ್ಟೆ ಮಂಗಳೂರು ಇದರ ವಾಕ್ ಮತ್ತು ಶ್ರವಣ ವಿಭಾಗ ಹಾಗೂ ಬೇರು ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ 3 ರಿಂದ 5 ವರ್ಷದ ಮಕ್ಕಳಿಗೆ ಉಚಿತ ವಾಕ್ ಮತ್ತು ಶ್ರವಣ ಪರೀಕ್ಷಾ ಶಿಬಿರವನ್ನು ವಕ್ವಾಡಿ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಯಿತು.
ಸಮಾಜದ ಒಳಿತಿಗಾಗಿ ಶ್ರಮಿಸುವ ವಕ್ವಾಡಿ ಫ್ರೆಂಡ್ಸ್ ಸಂಸ್ಥೆಯು ತಾಂತ್ರಿಕ ಯುಗದ ಎಲೆಕ್ಟ್ರಾನಿಕ್ಸ್ ಸಾಧನಗಳ ಗೀಳಿನ ವ್ಯಸನಕ್ಕೆ ಬಲಿಯಾಗುತ್ತಿರುವ ಪುಟ್ಟ ಮಕ್ಕಳಿಗೆ ಅಗತ್ಯವಾದ ಶಿಬಿರವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದು ವಕ್ವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮದ ಅಂಗನವಾಡಿ ಕೇಂದ್ರದ ಹಾಗೂ ವಿವಿಧ ಸಂಸ್ಥೆಯ ಒಟ್ಟು 50 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಿಬಿರದಲ್ಲಿ ಭಾಗಿಯಾದರು ಎಂದು ಆಯೋಜಕರು ತಿಳಿಸಿದ್ದಾರೆ.
ವಕ್ವಾಡಿ ಫ್ರೆಂಡ್ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ನಿಕಟಪೂರ್ವ ಅಧ್ಯಕ್ಷ ವಕ್ವಾಡಿ ಕಿರಣ್ ಶೆಟ್ಟಿ, ಸಕ್ರೀಯ ಸದಸ್ಯ, ಪ್ರಾಧ್ಯಾಪಕರಾದ ವಕ್ವಾಡಿ ಕೀರ್ತಿ ಶೆಟ್ಟಿ, ಮಾಜಿ ಅಧ್ಯಕ್ಷರಾದ ಹರೀಶ, ವಿಜಯ ಆಚಾರ್ಯ ಹಾಗೂ ಸದಸ್ಯರು, ಮಹಿಳಾ ಸಂಘಟನೆ ಪದಾಧಿಕಾರಿಗಳು, ವಿವಿಧ ಅಂಗನವಾಡಿ ಕೇಂದ್ರದ ಶಿಕ್ಷಕರು, ಪೋಷಕ ವರ್ಗ, ಕುಂದಾಪುರ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು, ಆಸರೆ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸಣಗಲ್ಲುಮನೆ ವಕ್ವಾಡಿ, ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ವಕ್ವಾಡಿ ಬಾಲಕೃಷ್ಣ ಶೆಟ್ಟಿ, ಬೇರು ಸಂಸ್ಥೆಯ ಅಧ್ಯಕ್ಷರಾದ ದಿವ್ಯ ಹೆಗಡೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು.