×
Ad

ಕಾರ್ಕಳ: 5 ಲಕ್ಷ ರೂ. ಮೌಲ್ಯದ ಅಡಿಕೆ ಕಳವು

Update: 2025-08-24 21:01 IST

ಕಾರ್ಕಳ, ಆ.24: ಶೆಡ್‌ನಲ್ಲಿ ಇರಿಸಲಾದ ಲಕ್ಷಾಂತರ ರೂ. ಮೌಲ್ಯದ ಅಡಿಕೆಗಳನ್ನು ಕಳವು ಮಾಡಿರುವ ಘಟನೆ ಆ.23ರಂದು ರಾತ್ರಿ ವೇಳೆ ನಡೆದಿದೆ.

ಮುಲ್ಲಡ್ಕ ಗ್ರಾಮದ ರವೀಂದ್ರ ಎಂಬವರ ಅಡಿಕೆ ತೋಟದಲ್ಲಿರುವ ಶೆಡ್‌ನ ಮುಂಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು, ತಲಾ 45-50 ಕೆ.ಜಿ. ತೂಕದ ಸುಲಿದ ಒಣ ಅಡಿಕೆಯ ಒಟ್ಟು 37 ಪ್ಲಾಸ್ಟಿಕ್ ಗೋಣಿ ಚೀಲಗಳ ಪೈಕಿ 34 ಪ್ಲಾಸ್ಟಿಕ್ ಗೋಣಿಗಳನ್ನು ಕಳವು ಮಾಡಿದ್ದಾರೆ. ಇವುಗಳ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಬಳಿಕ ಶೆಡ್‌ಗೆ ಅಳವಡಿಸಿದ 6,000ರೂ. ಮೌಲ್ಯದ ಸಿಸಿ ಕ್ಯಾಮರ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News