×
Ad

ಕಿರಿಮಂಜೇಶ್ವರದಲ್ಲಿ ವಿದ್ಯಾಪೋಷಕ್ 71ನೆ ಮನೆ ಹಸ್ತಾಂತರ

Update: 2025-05-19 18:47 IST

ಬೈಂದೂರು, ಮೇ 19: ವಿದ್ಯಾಪೋಷಕ್ ದ್ವಿತೀಯ ಪಿ.ಯು ವಿದ್ಯಾರ್ಥಿನಿ ಮನ್ವಿತಾ ಅವರಿಗೆ ಕಿರಿಮಂಜೇಶ್ವರದಲ್ಲಿ ಉಡುಪಿಯ ಡಾ.ಪಿ.ಎಸ್. ಗುರುಮೂರ್ತಿಯವರು ಅಗಲಿದ ತಮ್ಮ ತೀರ್ಥರೂಪ ಪಾದೆಬೆಟ್ಟು ಸುಬ್ರಹ್ಮಣ್ಯ ಭಟ್ ಅವರ ಜನ್ಮಶತಾಬ್ಧಿಯ ಪ್ರಯುಕ್ತ 6.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ ಕೊಟ್ಟ ‘ಸುವಸಂತಿ’ ಮನೆಯನ್ನು ರವಿವಾರ ಹಸ್ತಾಂತರಿಸಲಾಯಿತು.

ಡಾ.ಗುರುಮೂರ್ತಿ ಮತ್ತು ಡಾ.ರಾಜೇಶ್ವರೀ ದಂಪತಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ವಸಂತಿ ಎಸ್.ಭಟ್, ಬೆಂಗಳೂರಿನ ವೈದ್ಯರುಗಳಾದ ಡಾ. ಪಾದೆಬೆಟ್ಟು ಪದ್ಮನಾಭ ಭಟ್, ಡಾ.ಪಾದೆಬೆಟ್ಟು ಸೀತಾರಾಮ ಭಟ್ ಮಾತನಾಡಿದರು. ಅಧ್ಯಕ್ಷತೆಯನ್ನು ಶಾಸಕ ಗುರುರಾಜ ಗಂಟಿಹೊಳೆ ವಹಿಸಿದ್ದರು.

ಯು.ಎಸ್.ರಾಜಗೋಪಾಲ ಆಚಾರ್ಯ, ಸೀತಾರಾಮ ಭಟ್, ಪಾದೆಬೆಟ್ಟು ಶ್ರೀನಿವಾಸಮೂರ್ತಿ ಭಟ್, ಪಾದೆಬೆಟ್ಟು ವಿಶಾಲಾಕ್ಷಿ ಪಾಡಿತ್ತಾಯ, ಸುಬ್ರಹ್ಮಣ್ಯ ಪಾಡಿತ್ತಾಯ, ಜಾನಕಿ ರಾಮಕೃಷ್ಣ ರಾವ್, ಪ್ರೇಮ ಶ್ರೀನಿವಾಸ ಮೂರ್ತಿ ಭಟ್, ಕಲಾರಂಗದ ಯು.ವಿಶ್ವನಾಥ ಶೆಣೈ, ಎಸ್.ವಿ.ಭಟ್, ಕೆ.ಸದಾಶಿವ ರಾವ್, ವಿಜಯ ಕುಮಾರ ಮುದ್ರಾಡಿ, ಅನಂತರಾಜ ಉಪಾಧ್ಯ, ಎಚ್.ಎನ್.ವೆಂಕಟೇಶ್, ನಾಗರಾಜ ಹೆಗಡೆ, ವಿನೋದಾ ಎಂ.ಕಡೆಕಾರ್, ಪ್ರಸನ್ನ ಹೆಗಡೆ ಉಪಸ್ಥಿತರಿದ್ದರು.

ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News