‘ಗಾಂಧಿ ಉಡುಪಿ ಭೇಟಿ-90: ಒಂದು ಅವಲೋಕನ
Update: 2024-09-28 19:44 IST
ಉಡುಪಿ, ಸೆ.28: ರಥಬೀದಿ ಗೆಳೆಯರು ಉಡುಪಿ ಆಶ್ರಯದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಈ ವರ್ಷ ಗಾಂಧೀಜಿ ಉಡುಪಿಗೆ ಭೇಟಿ ಕೊಟ್ಟು 90 ವರ್ಷಗಳಾಗಿರುವ ಹಿನ್ನಲೆಯಲ್ಲಿ ಗಾಂಧೀಜಿ ಉಡುಪಿ ಭೇಟಿಗೆ ತೊಂಬತ್ತು - ಒಂದು ಅವಲೋಕನ ಕಾರ್ಯಕ್ರಮವನ್ನು ಅ.2ರಂದು ಸಂಜೆ 5ಗಂಟೆಗೆ ಉಡುಪಿ ಅದಮಾರು ಮಠಲೇನ್‌ಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ಜರಗಲಿದೆ.
ಕಾರ್ಯಕ್ರಮದಲ್ಲಿ ಉಡುಪಿ ಎಂ.ಜಿಂ.ಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಅವಲೋಕನ ಮಾಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.