×
Ad

ಜು.1: ಐಎಂಎನಿಂದ ವೈದ್ಯರ ದಿನಾಚರಣೆ

Update: 2025-06-30 22:07 IST

ಉಡುಪಿ, ಜೂ.30: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉಡುಪಿ- ಕರಾವಳಿ ಶಾಖೆಯಿಂದ ಜು.1ರ ಸಂಜೆ 7:30ಕ್ಕೆ ಬ್ರಹ್ಮಗಿರಿಯಲ್ಲಿ ರುವ ಐಎಂಎ ಭವನದಲ್ಲಿ ‘ವೈದ್ಯರ ದಿನಾಚರಣೆ’ ನಡೆಯಲಿದೆ.

ಮಣಿಪಾಲ ಕೆಎಂಸಿ ಹಿರಿಯ ಸಮಾಲೋಚಕ ಡಾ.ಪ್ರತಾಪ್ ಕುಮಾರ್, ಡಿಎಚ್‌ಒ ಡಾ.ಬಸರಾಜ ಹುಬ್ಬಳ್ಳಿ ಪಾಲ್ಗೊಳ್ಳಲಿದ್ದಾರೆ. ಐಎಂಎ ಉಡುಪಿ- ಕರಾವಳಿ ಶಾಖೆಯ ಅಧ್ಯಕ್ಷ ಡಾ.ಕೆ.ಸುರೇಶ್ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ.

ಡಾ.ಬಿ.ಸಿ.ರಾಯ್ ಅವರ ಬಗ್ಗೆ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಮಾತನಾಡಲಿದ್ದಾರೆ. ಹಿರಿಯ ವೈದ್ಯ ರಾದ ಡಾ.ಶರತ್ ರಾವ್, ಡಾ. ಪ್ರಕಾಶ್ ಭಟ್, ಡಾ. ವಿಷ್ಣು ಶೆಣೈ ಬೆಳ್ಳೆ ಹಾಗೂ ಡಾ. ಗೀತಾ ಪುತ್ರನ್ ಮತ್ತು ಈ ವರ್ಷದಲ್ಲಿ ಅತ್ಯುತ್ತಮ ಸಾಧನೆಗೈದ ವೈದ್ಯರನ್ನು ಸಮ್ಮಾನಿಸಲಾಗುವುದು ಎಂದು ಐಎಂಎ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News