ಫೆ.4ರಂದು ಸವಿತಾ ಮಹರ್ಷಿ ಜಯಂತ್ಯೋತ್ಸವ ಆಚರಿಸಲು ಮನವಿ
Update: 2025-01-25 19:37 IST
ಉಡುಪಿ, ಜ.25: ಈ ಬಾರಿ ಫೆ.5ರಂದು ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮ ಆಚರಿಸಲು ಸರಕಾರದಿಂದ ಸುತ್ತೋಲೆ ಬಂದಿದ್ದು, ಫೆ.4ರಂದು ಮಂಗಳವಾರ ಶ್ರೀಸವಿತಾ ಮಹರ್ಷಿ ಜನುಮ ದಿನವಾಗಿರುವುದರಿಂದ ಸವಿತಾ(ಕ್ಷೌರಿಕ) ಬಂಧುಗಳಿಗೆ ರಜಾದಿನವಾಗಿರುವ ಇದೇ ದಿನ ಕಾರ್ಯಕ್ರಮ ನಡೆಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ್ ಭಂಡಾರಿ ನಿಂಜೂರ್, ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ್ ಸಾಲಿಯಾನ್ ಅದಿಉಡುಪಿ, ಜತೆ ಕಾರ್ಯದರ್ಶಿಗಳಾದ ಹರೀಶ್ ಭಂಡಾರಿ ಕರಂಬಳ್ಳಿ, ಸುಧಾಕರ್ ಭಂಡಾರಿ ಸರ್ಕಾರಿಗುಡ್ಡೆ, ಉಡುಪಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜು ಭಂಡಾರಿ ಕಿನ್ನಿಮುಲ್ಕಿ, ಕಾರ್ಕಳ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ನಾಗೇಶ್ ಭಂಡಾರಿ ಬಜೆಗೋಳಿ, ಕಾಪು ತಾಲೂಕು ಸವಿತಾ ಸಮಾಜದ ಕಾರ್ಯದರ್ಶಿ ಭಾಸ್ಕರ್ ಭಂಡಾರಿ ಬೆಳಪು ಉಪಸ್ಥಿತರಿದ್ದರು.