×
Ad

ಆ.6ರಂದು ನೇರ ಸಂದರ್ಶನ

Update: 2024-07-27 19:28 IST

ಉಡುಪಿ: ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಖಾಲಿ ಇರುವ ಎಸ್.ಹೆಚ್ (ನೈರ್ಮಲ್ಯ ಹಾಗೂ ಆರೋಗ್ಯಕರ) ಜಿಲ್ಲಾ ಸಮಾಲೋಚಕರ ಹಾಗೂ ಎಸ್‌ಎಲ್‌ಡಬ್ಲ್ಯೂಎಂ ಸಮಾಲೋಚಕರ ತಲಾ ಒಂದು ತಾತ್ಕಾಲಿಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಹೊರ ಸಂಪನ್ಮೂಲ ಏಜೆನ್ಸಿ ಮೂಲಕ ಆಯ್ಕೆ ಮಾಡಲು ಆಗಸ್ಟ್ 6ರಂದು ಬೆಳಗ್ಗೆ 10 ಗಂಟೆಗೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.

ಎಸ್.ಹೆಚ್ ಜಿಲ್ಲಾ ಸಮಾಲೋಚಕರ ಹುದ್ದೆಗೆ ಇಂಜಿನಿಯರಿಂಗ್/ ಸೋಷಿಯಲ್ ಸೈನ್ಸ್/ ಪಬ್ಲಿಕ್ ಹೆಲ್ತ್, ಡಿಪ್ಲೋಮಾಗಳಲ್ಲಿ ಪದವಿ, ಡಿಗ್ರಿ ಇನ್ ರೂರಲ್ ಮ್ಯಾನೆಜ್‌ಮೆಂಟ್ ಅಥವಾ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಇತರೆ ಸಂಬಂಧಿತ ಕ್ಷೇತ್ರಗಳಲ್ಲಿ ವಿದ್ಯಾರ್ಹತೆ ಹೊಂದಿರುವವರು ಹಾಗೂ ಎಸ್.ಎಲ್.ಡಬ್ಲ್ಯೂ.ಎಂ ಸಮಾಲೋಚಕರ ಹುದ್ದೆಗೆ ಬಿ.ಇ ಎನ್ವಿರಾನ್‌ ಮೆಂಟಲ್ ಇಂಜಿನಿಯರಿಂಗ್/ ಬಿ.ಇ ಸಿವಿಲ್ ಇಂಜಿನಿಯರಿಂಗ್ ಜೊತೆಗೆ ಮಾನ್ಯತೆ ಪಡೆದ ವಿವಿಯಿಂದ ಪರಿಸರ ವಿಜ್ಞಾನದಲ್ಲಿ ವಿಶೇಷತೆ ಹೊಂದಿರುವ ಹಾಗೂ ಕನಿಷ್ಠ ೩ ವರ್ಷದ ಸೇವಾ ಅನುಭವವುಳ್ಳ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂ.ಸಂಖ್ಯೆ: ೦೮೨೦-೨೫೭೪೯೪೨ಅನ್ನು ಸಂಪರ್ಕಿಸಬಹುದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News