×
Ad

ಉಡುಪಿ ಹತ್ಯಾಕಾಂಡ ‘ವಿಶ್ವ ದಾಖಲೆ’ ಎಂದು ವಿಕೃತಿ ಮೆರೆದ ‘‘ಹಿಂದು ಮಂತ್ರ’ ಇನ್ಸ್ಟಾಗ್ರಾಮ್ ಖಾತೆ!

Update: 2023-11-16 23:06 IST

ಉಡುಪಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಕಿಡಿಗೇಡಿ ಹಿಂದುತ್ವವಾದಿಗಳು ಸಂಭ್ರಮಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಹರಿಬಿಟ್ಟು ಆತಂಕ ಸೃಷ್ಟಿಸಿದ್ದಾರೆ.

ನ.12ರಂದು ನೇಜಾರಿನಲ್ಲಿ ನಡೆದ ತಾಯಿ, ಮೂವರು ಮಕ್ಕಳ ಕಗ್ಗೊಲೆಗೆ ಜಾತಿ ಭೇದ ಮರೆತು ಎಲ್ಲರೂ ಮರುಗುತ್ತಿರು ವಾಗ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ‘ಹಿಂದು ಮಂತ್ರ’ ಎಂಬ ಪೇಜ್‌ನಲ್ಲಿ ಕೊಲೆ ಆರೋಪಿಯನ್ನು ಸಾಧಕನಂತೆ ಬಿಂಬಿಸಿರುವುದು ಕಂಡುಬಂದಿದೆ.

‘ಹಿಂದು ಮಂತ್ರ’ (Hindu_Mantra) ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ಬಗ್ಗೆ ‘ಸ್ಟೋರಿ’ ಹಾಕಲಾಗಿದ್ದು, ‘‘15 ನಿಮಿಷದಲ್ಲಿ 4 ಮುಸ್ಲಿಮರನ್ನು ಕೊಂದು ವಿಶ್ವ ದಾಖಲೆ ನಿರ್ಮಿಸಿದ್ದಾನೆ’’ ಎಂಬ ಶೀರ್ಷಿಕೆ ನೀಡಲಾಗಿದೆ. ಅಲ್ಲದೆ, ಆರೋಪಿ ಪ್ರವೀಣ್ ಚೌಗುಲೆ ಫೋಟೋಗೆ ‘ಕಿರೀಟ’ ತೊಡಿಸಿ ವಿಕೃತಿ ಮೆರೆಯಲಾಗಿದೆ. ತಮ್ಮ ಕೃತ್ಯಕ್ಕೂ ಸಮರ್ಥನೆ ನೀಡಿರುವ ಕಿಡಿಗೇಡಿಗಳು ‘ಉಡುಪಿ ಹುಡುಗಿಯರ ವಿಚಾರದಲ್ಲಿ ಯಾರೂ ಬಂದಿಲ್ಲ. ಆದ್ದರಿಂದ, ನಾವೂ ಈ ವಿಚಾರಕ್ಕೆ ಬರುವುದಿಲ್ಲ’ ಎಂದು ಬರೆಯಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಲ್ಲದೆ ಈ ‘ಹಿಂದು ಮಂತ್ರ’ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮುಸ್ಲಿಮ್ ಮಹಿಳೆಯರನ್ನು ಅವಹೇಳನ ಮಾಡುವಂತಹ ಹಲವಾರು ಫೋಟೊ, ವಿಡಿಯೋಗಳನ್ನು ಹಂಚಿಕೊಂಡು ಉದ್ವಿಗ್ನತೆ ಸೃಷ್ಟಿಸಲು ಯತ್ನಿಸಿದ ಹಲವು ಪೋಸ್ಟ್‌ಗಳಿವೆ. ಈ ಬಗ್ಗೆಯೂ ಕ್ರಮವಾಗಲಿ ಎಂಬ ಒತ್ತಾಯ ಕೇಳಿಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News