×
Ad

ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ: ಉಡುಪಿ ನಗರಸಭೆ ಮನವಿ

Update: 2023-10-05 19:15 IST

ಉಡುಪಿ, ಅ.5: ಉಡುಪಿ ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆ, ವಾಣಿಜ್ಯ ಕಟ್ಟಡ, ಅಂಗಡಿ, ಹೋಟೆಲ್ ಇತರೆ ಕಟ್ಟಡಗಳಿಂದ ಉತ್ಪತ್ತಿ ಯಾಗುವ ಘನತ್ಯಾಜ್ಯ ವಸ್ತುಗಳನ್ನು ಮೂಲದಲ್ಲಿ ಬೇರ್ಪಡಿಸಿ, ಹಸಿ ಕಸ, ಒಣ ಕಸ, ಅಪಾಯಕಾರಿ ಕಸಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಹಸಿ ಕಸವನ್ನು ಮನೆಯಲ್ಲಿ ಗೊಬ್ಬರವಾಗಿ ಪರಿವರ್ತನೆ ಮಾಡ ಬೇಕು. 100 ಕೆ.ಜಿ.ಗಿಂತ ಹೆಚ್ಚು ಉತ್ಪತ್ತಿಯಾಗುವ ಬಹುಮಹಡಿ ಕಟ್ಟಡ, ಹೋಟೆಲ್‌ನವರು ಹಸಿ ಕಸವನ್ನು ಕಾಂಪೋಸ್ಟ್ ಮಾಡಿ ಮರುಬಳಕೆ ಮಾಡಬೇಕು ಎಂದು ಉಡುಪಿ ನಗರಸಭೆ ಪ್ರಕಟಣೆ ತಿಳಿಸಿದೆ.

ಕರ್ನಾಟಕ ಮುನ್ಸಿಪಲ್ ಮ್ಯಾನೇಜ್ ವೇಸ್ಟ್ 2016 ರಲ್ಲಿ ಈ ಅಂಶವನ್ನು ಅಳವಡಿಸಿದ್ದು, ಇದನ್ನು ಮಾಲಕರು ಕಡ್ಡಾಯ ವಾಗಿ ನಿರ್ವಹಿಸಬೇಕು. ಈ ನಿಯಮವನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮನೆಗಳಲ್ಲಿ, ಮದುವೆ ಮಂಟಪ, ಸಮಾರಂಭಗಳ ಹಾಲ್‌ಗಳಲ್ಲಿ ಕಡ್ಡಾಯ ವಾಗಿ ಮರುಬಳಕೆಯಾಗುವ ಸ್ಟೀಲ್ ತಟ್ಟೆ, ಸ್ಟೀಲ್ ಲೋಟ, ಕುಡಿಯುವ ನೀರು, ವಾಟರ್‌ಫಿಲ್ಟರ್ ಬಳಸಬೇಕು. ಸಭೆ, ಸಮಾರಂಭಗಳಲ್ಲಿ ಮರುಬಳಕೆ ವಸ್ತುಗಳನ್ನು ಉಪಯೋಗಿಸುವು ದರಿಂದ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡುವುದರೊಂದಿಗೆ ನಗರವನ್ನು ಸ್ವಚ್ಛವಾಗಿಡಲು ಸಹಕಾರಿಯಾಗುತ್ತದೆ.

ತ್ಯಾಜ್ಯ ವಸ್ತುಗಳನ್ನು ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ಹಾಕಿ ರಸ್ತೆ ಬದಿ, ಖಾಲಿ ಸ್ಥಳ, ಚರಂಡಿಗಳಲ್ಲಿ ಬಿಸಾಡುವುದರಿಂದ ಆಹಾರ ಕ್ಕಾಗಿ ಪ್ರಾಣಿಗಳು ಪ್ಲಾಸ್ಟಿಕನ್ನು ತಿಂದು ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಮರಣ ಹೊಂದುತ್ತಿವೆ. ಈ ರೀತಿ ತ್ಯಾಜ್ಯ ವಸ್ತುಗಳನ್ನು ರಸ್ತೆಬದಿಯಲ್ಲಿ, ಖಾಲಿ ಸ್ಥಳಗಳಲ್ಲಿ ಹಾಗೂ ನೀರಿಗೆ ಬಿಸಾಡುವಂತಹ ವ್ಯಕ್ತಿಗಳು ಕಂಡುಬಂದಲ್ಲಿ ಅವರನ್ನು ಗುರುತಿಸಿ ಅವರ ಹೆಸರನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆ ಎಚ್ಚರಿಸಿದೆ.

ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸರಕಾರವು ಈಗಾಗಲೇ ನಿಷೇಧಿಸಿದ್ದು, ಅಂತಹ ಪ್ಲಾಸ್ಟಿಕ್ ಬಳಸುವವರ ಮತ್ತು ಮಾರುವವರ ವಿರುದ್ಧ ಕ್ರಮ ಜರುಗಿಸಿ, ದಂಡ ವಿಧಿಸಲಾಗುವುದು. ಪ್ರತಿ ನಾಗರಿಕರು ಪೇಟೆಗೆ ಬರುವಾಗ ಬಟ್ಟೆ ಚೀಲ, ನಾರಿನ ಚೀಲ ತೆಗೆದುಕೊಂಡು ಬಂದು ಸಾಮಾಗ್ರಿ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಚೀಲ ಕೇಳುವಂತಿಲ್ಲ.

ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ತ್ಯಜಿಸುವುದರಿಂದ ಉತ್ತಮ ಗಾಳಿ, ಪರಿಸರ ಹಾಗೂ ಜಲವನ್ನು ಪಡೆಯಬಹುದಾಗಿದೆ. ಪ್ಲಾಸ್ಟಿಕ್ ವಸ್ತುಗಳಿಂದ ಸಾಂಕ್ರಾಮಿಕ ರೋಗಗಳಾದ ಕ್ಯಾನ್ಸರ್ ಹಾಗೂ ಇತರೆ ಗಂಭೀರ ಕಾಯಿಲೆಗಳು ಉಂಟಾಗುತ್ತದೆ. ಆದ್ದರಿಂದ ಪ್ಲಾಸ್ಟಿಕ್ ತ್ಯಜಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News