×
Ad

ಮುಂಬೈ ಮ್ಯಾರಥಾನ್‌ನಲ್ಲಿ ಸಾಧನೆ: ಸಂಜೀವ ಬಳ್ಕೂರ್‌ಗೆ ಸನ್ಮಾನ

Update: 2026-01-28 19:26 IST

ಉಡುಪಿ, ಜ.28: ಟಾಟಾ ಮುಂಬೈ ಇತ್ತೀಚೆಗೆ ನಡೆಸಿದ ರಾಷ್ಟ್ರೀಯ ಮಟ್ಟದ ಮ್ಯಾರಥಾನ್ ನಲ್ಲಿ ಭಾಗವಹಿಸಿ ನಾಲ್ಕು ಗಂಟೆ 56 ನಿಮಿಷದಲ್ಲಿ 42 ಕಿ.ಮೀ ಓಡಿ ಸಾಧನೆ ಮಾಡಿದ ಹಿರಿಯ ಕ್ರೀಡಾಪಟು ಸಂಜೀವ ಬಳ್ಕೂರು ಅವರನ್ನು ಅಜ್ಜರಕಾಡು ಸರಕಾರಿ ಜಿಮ್ಮಿನಲ್ಲಿ ಬುಧವಾರ ಸನ್ಮಾನ ಮಾಡಲಾಯಿತು.

ಜಿಮ್ಮಿನ ತರಬೇತುದಾರ ಉಮೇಶ್ ಮಟ್ಟು ಮಾತನಾಡಿ, ಸಂಜೀವ ಬಳ್ಕೂರು ಈ ಅಪೂರ್ವ ಸಾಧನೆ ಮಾಡಿ ಜಿಮ್ಮಿನ ಬಲಾಢ್ಯ ವ್ಯಕ್ತಿ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಸಂಜೀವ ಬಳ್ಕೂರು ಮಾತನಾಡಿ, ಜಿಮ್ಮಿನ ಸದಸ್ಯರೆಲ್ಲರೂ ಐಕ್ಯತೆ ಹಾಗೂ ಸೌಹಾರ್ದತೆ ಯಿಂದ ಮತ್ತು ಒಗ್ಗಟ್ಟಿನಿಂದ ತಮ್ಮ ತಮ್ಮ ವ್ಯಾಯಾಮದಲ್ಲಿ ತೊಡಗಿಕೊಳ್ಳಬೇಕು. ಈ ಆಧುನಿಕ ಆಹಾರ ಪದ್ಧತಿ ಯಿಂದ ಎಲ್ಲರಿಗೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತವೆ. ಇದನ್ನು ಮನಗೊಂಡು ಯಾವುದೇ ರೀತಿಯ ಸಮಸ್ಯೆಗಳಿಗೆ ಎಡ ಮಾಡಿಕೊಡದೆ ಒಗ್ಗಟ್ಟಿನಿಂದ ನಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿಮ್ಮಿನ ಸದಸ್ಯರಾದ ಪ್ರಶಾಂತ್ ಕೋಟ್ಯನ್ ಮಲ್ಪೆ, ಉದಯ್ ಕುಮಾರ್ ಕಲ್ಮಾಡಿ, ಪ್ರಶಾಂತ್ ಜತ್ತನ್, ಎಲ್‌ಐಸಿ ಯ ಹಿರಿಯ ಅಧಿಕಾರಿ ಆನಂದ್ ಮತ್ತು ದೀಪಕ್ ಕಾಮತ್, ಸುಧಾಕರ್ ಬಿಜೂರು ಹಾಗೂ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News