×
Ad

ಆದಿಉಡುಪಿ ರಾಷ್ಟ್ರೀಯ ಹೆದ್ದಾರಿ ಹೊಂಡಮಯ| ಗಮನ ಸೆಳೆದ ವೇಷಧಾರಿಗಳ ವಿಶಿಷ್ಟ ಪ್ರದರ್ಶನ

Update: 2024-08-27 19:11 IST

ಉಡುಪಿ: ಸಂಪೂರ್ಣ ಹೊಂಡಮಯವಾದ ಆದಿಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಮಸ್ಯೆಯನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಯಮ ಧರ್ಮ, ಚಿತ್ರ ಗುಪ್ತ ಹಾಗೂ ಪ್ರೇತಾತ್ಮದ ವೇಷ ತೊಟ್ಟ ವೇಷಧಾರಿಗಳು ವಿಶಿಷ್ಟ ರೀತಿಯಲ್ಲಿ ಸಾರ್ವಜನಿಕರ ಗಮನ ಸೆಳೆದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆದಿ ಉಡುಪಿಯ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ತುಂಬಿದ್ದು, ವಾಹನ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದೆ. ಅಪಾಯಕಾರಿ ಎನಿಸಿರುವ ಈ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ವೇಷಧಾರಿಗಳು ವಿಶಿಷ್ಟ ರೀತಿಯ ಪ್ರದರ್ಶನ ನೀಡಿದರು.

ಪ್ರೇತಾತ್ಮದ ವೇಷ ಧರಿಸಿದ ಇಬ್ಬರು ಹೊಂಡಗಳ ಮೇಲಿಂದ ಜಿಗಿದರೆ, ಬಳಿಕ ಯಮ ಧರ್ಮ ಹಾಗೂ ಚಿತ್ರಗುಪ್ತ ಅವರ ಜಿಗಿತದ ಅಳತೆಯನ್ನು ಮಾಪನ ದಲ್ಲಿ ಅಳೆದರು. ಈ ಮೂಲಕ ಈ ಹೊಂಡಗಳು ಬಹಳ ಅಪಾಯಕಾರಿ ಎಂಬುದಾಗಿ ಬಿಂಬಿಸಿದರು. ಈ ವೇಷಧಾರಿಗಳ ವಿಶಿಷ್ಟ ರೀತಿಯ ಪ್ರದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News