×
Ad

ಶೈಕ್ಷಣಿಕ ರಂಗದಲ್ಲಿ ಡಿಕೆಎಸ್ಸಿ ಅಧೀನದ ಅಲ್ ಇಹ್ಸಾನ್‌ ಸೇವೆ ಶ್ಲಾಘನೀಯ: ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ

Update: 2023-08-17 19:39 IST

ಉಡುಪಿ: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮಂಗಳೂರು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್ ಸುಮಾರು 26 ವರ್ಷಗಳಲ್ಲಿ ಶೈಕ್ಷಣಿಕ ರಂಗದಲ್ಲಿ ಅದರಲ್ಲೂ ಮಹಿಳಾ ವಿದ್ಯಾಭ್ಯಾಸ ಮತ್ತು ಮಹಿಳಾ ಸಬಲೀಕರಣದಲ್ಲಿ ಸಲ್ಲಿಸಿದ ಸೇವೆ ಅಪಾರ ಹಾಗೂ ಶ್ಲಾಘನೀಯವಾಗಿದೆ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಹೇಳಿದರು. ‌

ಅವರು ಅಲ್ ಇಹ್ಸಾನ್ ಕ್ಯಾಂಪಸ್‌ ನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ಮುಹಮ್ಮದ್ ಹಫೀಝ್ ಯುಎಇ ಮಾತನಾಡಿದರು. ಸಂಸ್ಥೆಯ ಜನರಲ್ ಮ್ಯಾನೇಜರ್ ಯು ಕೆ ಮುಸ್ತಫಾ ಸಅದಿ, ದಅವಾ ಪ್ರಾಂಶುಪಾಲರಾದ ಸ್ವಾಬಿರ್ ಸಅದಿ, ಕೇಂದ್ರ ಸಮಿತಿಯ ಹಾಜಿ ಫಾರೂಕ್ ಕರ್ನಿರೆ, ಮರ್ಕಝ್ ಆಡಳಿತ ಸಮಿತಿ ಉಪಾಧ್ಯಕ್ಷರಾದ ಹಾಜಿ ಇಸ್ಮಾಯಿಲ್ ಕಿನ್ಯ, ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ಶಿಕ್ಷಣ ಸಮಿತಿ ಮುಖ್ಯಸ್ಥರಾದ ಅನ್ವರ್ ಗೂಡಿನಬಳಿ ಶಿಕ್ಷಣ ತಜ್ಞ ರಫೀಕ್ ಮಾಸ್ಟರ್, ಅಡ್ವಕೇಟ್ ಮಹಮ್ಮದ್ ಅಲಿ ಕಾಪು. ಮರ್ಕಝ್ ಸದಸ್ಯರಾದ ಎಮ್ ಎಚ್ ಬಿ ಮುಹಮ್ಮದ್, ಆಜಬ್ಬ ಅಭಿಮಾನ್, ಮನ್ಸೂರ್ ಕೃಷ್ಣಾಪುರ ಕಾಂಗ್ರೆಸ್ ಮುಖಂಡರಾದ ಶೇಕಬ್ಬ ಉಚ್ಚಿಲ ಹಾಗೂ ಉಸ್ಮಾನ್ ಕಾಪು ಮುಂತಾದವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಹಬೀಬುರ್ರಹ್ಮಾನ್ ಸ್ವಾಗತಿಸಿ ಕೊನೆಗೆ ವಂದಿಸಿದರು.

ಅದಕ್ಕೂ ಮೊದಲು ಮರ್ಕಝ್ ಮುಖ್ಯ ಕ್ಯಾಂಪಸ್ಸಿನಲ್ಲಿ ಸಂಸ್ಥೆಯ ಜನರಲ್ ಮ್ಯಾನೇಜರ್ ಯು ಕೆ ಮುಸ್ತಫಾ ಸಅದಿ ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಂಸ್ಥೆಯ ಎಲ್ಲಾ ವಿಭಾಗದ ಉಸ್ತಾದರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News