×
Ad

ಅಲೆವೂರು ಗ್ರಾಪಂ: ಗೃಹಲಕ್ಷ್ಮಿ ಯೋಜನೆಗೆ ಚಾಲನೆ

Update: 2023-08-30 20:25 IST

ಉಡುಪಿ, ಆ.30: ಇಲ್ಲಿನ ಅಲೆವೂರು ಗ್ರಾಪಂನ ವತಿಯಿಂದ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಸಂಕಲ್ಪ ಸಭಾಂಗಣದಲ್ಲಿ ಇಂದು ಚಾಲನೆ ನೀಡಲಾಯಿತು.

ಅಲೆವೂರು ಗ್ರಾಪಂನ ಉಪಾಧ್ಯಕ್ಷರಾದ ಅಮೃತಾ ಪೂಜಾರಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಕೃಷ್ಣಮೂರ್ತಿ, ಗ್ರಾಪಂ ಸದಸ್ಯ ರಾದ ಶ್ರೀಕಾಂತ್ ನಾಯಕ್, ಸುಧಾಕರ ಪೂಜಾರಿ, ಮಾಜಿ ಅದ್ಯಕ್ಷರಾದ ಪುಷ್ಪ ಅಂಚನ್, ಜಲೇಶ್ ಶೆಟ್ಟಿ , ಲಿಸ್ವೀಟಾ ಅಮ್ಮಣ್ಣ, ಗುರುರಾಜ ಸಾಮಗ, ಅವಿನಾಶ್ ಶೆಟ್ಟಿಗಾರ್, ಮನೋಹರ ನಾಯ್ಕ, ಮನಮೋಹನ, ಶಬರೀಶ್ ಸುವರ್ಣ, ರೂಪೇಶ್ ದೇವಾಡಿಗ, ಲಲಿತಾ ನಾಯ್ಕ ರೇಣುಕಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ದಯಾನಂದ ಬೆನ್ನೂರ ಸ್ವಾಗತಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News