×
Ad

ಅಂಬಲಪಾಡಿ: ಪ್ರೇಮಿಗಳಿಬ್ಬರು ನೇಣು‌ ಬಿಗಿದು ಆತ್ಮಹತ್ಯೆ

Update: 2025-10-16 22:45 IST

ಉಡುಪಿ: ಪ್ರೇಮಿಗಳಿಬ್ಬರು ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬಲಪಾಡಿಯ ಕಾಳಿಕಾಂಬ ನಗರದ ಲೇಬರ್ ಕಾಲನಿಯಲ್ಲಿ ಇಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಪವಿತ್ರ (17) ಹಾಗೂ ಮಲ್ಲೇಶ (23) ಎಂದು ಗುರುತಿಸಲಾಗಿದೆ. ಪವಿತ್ರ ಅಜ್ಜರಕಾಡು ಸರಕಾರಿ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಈಕೆಯ ತಾಯಿ ರಾಯಚೂರಿಗೆ ತೆರಳಿದ್ದ ಮೇಲೆ ಮಲ್ಲೇಶ ಮನೆಗೆ ಬಂದಿದ್ದ ಎನ್ನಲಾಗಿದೆ. ಬಳಿಕ ಇವರಿಬ್ಬರೂ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News