×
Ad

ಅಂಬೇಡ್ಕರ್, ದಲಿತರಿಗೆ ಅವಹೇಳನ ಪ್ರಕರಣ: ಹಿಂಜಾವೇಯಿಂದ ಉಮೇಶ್ ನಾಯ್ಕ್ ಉಚ್ಚಾಟನೆ

Update: 2024-10-13 20:41 IST

ಉಡುಪಿ, ಅ.13: ಅಂಬೇಡ್ಕರ್ ಮತ್ತು ದಲಿತರು ಬಗ್ಗೆ ಅಪಶಬ್ದಗಳನ್ನು ನುಡಿದ ಉಮೇಶ್ ನಾಯ್ಕ್ ಸಮಾಜ ಒಡೆಯುವ ಮತ್ತು ರಾಷ್ಟ್ರ ನಾಯಕರ ಬಗ್ಗೆ ಆಡಿರುವ ಮಾತುಗಳನ್ನು ಹಿಂದೂ ಜಾಗರಣ ವೇದಿಕೆ ಖಂಡಿಸಿದೆ.

ಹಿಂದೂ ಜಾಗರಣ ವೇದಿಕೆಯ ಎಲ್ಲಾ ಜವಾಬ್ದಾರಿಯಿಂದ ಉಮೇಶ್ ನಾಯ್ಕ್ ಸೂಡ ಅವರನ್ನು ತಕ್ಷಣದಿಂದ ಜಾರಿ ಬರುವಂತೆ ಮುಕ್ತಗೊಳಿಸಲಾಗಿದೆ. ಅವರ ಮಾತುಗಳಿಗೆ ಸಂಪೂರ್ಣವಾಗಿ ಅವರೇ ಹೊಣೆಯಾಗಿದ್ದು ಅವರ ಮಾತುಗಳಿಗೂ ಮತ್ತು ಹಿಂದೂ ಜಾಗರಣ ವೇದಿಕೆಯ ನಿಲುವಿಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ ಎಂದು ವೇದಿಕೆಯ ಜಿಲ್ಲಾ ಸಂಯೋಜಕ ಶಂಕರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News