ಬಲಾಯಿಪಾದೆ ಕನ್ನರ್ಪಾಡಿ ತೋಡು ಹೂಳೆತ್ತುವ ಕಾಮಗಾರಿ ಆರಂಭ
ಉಡುಪಿ: ಮಳೆಗಾಲದ ಪೂರ್ವಭಾವಿಯಾಗಿ ಹಲವು ವರ್ಷಗಳಿಂದ ಹೂಳು ತೆರವುಗೊಳಿಸದೆ ಹೂಳು ತುಂಬಿ ಕೃತಕ ನೆರೆ ಸೃಷ್ಟಿಯಾಗುವ ಹಿನ್ನಲೆಯಲ್ಲಿ ಕಡೆಕಾರ್ ಗ್ರಾಪಂ ವ್ಯಾಪ್ತಿಯ ಬಲಾಯಿಪಾದೆ ಯಿಂದ ಕನ್ನರ್ಪಾಡಿವರೆಗಿನ ಸುಮಾರು 2 ಕಿಲೋ ಮೀಟರ್ ವ್ಯಾಪ್ತಿಯ ತೋಡಿನ ಹೂಳು ತೆರವುಗೊಳಿಸುವ ಕಾಮಗಾರಿ ಆರಂಭಗೊಂಡಿದೆ.
ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರೊಂದಿಗೆ ಚರ್ಚಿಸಿ ಗ್ರಾಮಾಂತರ ಭಾಗದ ತೋಡುಗಳ ಹೂಳು ತೆರವು ಮಾಡಲು ಪ್ರಾಕೃತಿಕ ವಿಕೋಪ ನಿಧಿಯಿಂದ ಅನುದಾನ ಒದಗಿಸಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಕಾಮಗಾರಿ ನಡೆಸಲು ಸೂಚಿಸಲಾಗಿದೆ ಎಂದರು.
ಸಣ್ಣ ನೀರಾವರಿ ಇಲಾಖೆಯ ಮೂಲಕ ಕುತ್ಪಾಡಿ ಗರಡಿ ರಸ್ತೆಯ ತೋಡಿಗೆ ತಡೆಗೋಡೆ ನಿರ್ಮಾಣಕ್ಕೆ ಶೀಘ್ರ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಡೆಕಾರ್ ಗ್ರಾಪಂ ಅಧ್ಯಕ್ಷ ಜಯಕರ್ ಶೇರಿಗಾರ್, ಸದಸ್ಯರಾದ ಪ್ರಶಾಂತ್ ಸಾಲ್ಯಾನ್, ವಿನೋದಿನಿ, ಸುಲೋಚನಾ ಸೋಮಯ್ಯ, ಸವಿತಾ ಹರೀಶ್ ಸ್ಥಳೀಯ ಪ್ರಮುಖರಾದ ಮಾಲತಿ ಶೆಟ್ಟಿ, ಅಶೋಕ್ ಸುವರ್ಣ, ಕಿರಣ್ ಸುವರ್ಣ, ಗೌತಮ್, ವಿಜಯ್ ಭಟ್, ದೀಪಕ್ ಪುತ್ರನ್, ಅರುಣ್ ಕಡೆಕಾರ್, ಜಯಕರ ಸನಿಲ್, ಅಶೋಕ್ ಭಂಡಾರಿ, ಹರೀಶ್ ಶೆಟ್ಟಿಗಾರ್, ರಾಕೇಶ್, ಪ್ರದೀಪ್, ಮಂಜುನಾಥ್, ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.