ಬೈಕ್ ಸ್ಕಿಡ್, ಸಹಸವಾರೆ ಮೃತ್ಯು
Update: 2023-10-18 21:48 IST
ಹೆಬ್ರಿ, ಅ.18: ಮೋಟಾರು ಬೈಕೊಂದು ಸ್ಕಿಡ್ ಆಗಿ ಸಂಭವಿಸಿದ ಅಪಘಾತದಲ್ಲಿ ಸಹಸವಾರ ಮೃತರಾಗಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಕ್ರಾಸ್ ಸಮೀಪ ಮಂಗಳವಾರ ರಾತ್ರಿ 8ಗಂಟೆ ಸುಮಾರಿಗೆ ನಡೆದಿದೆ. ಮೃತರನ್ನು ಸಾರಬೀ ಎಂದು ಗುರುತಿಸಲಾಗಿದೆ.
ಸಾರಬೀ ಅವರು ಅಬ್ದುಲ್ ಬಶಿತ್‌ರ ಬೈಕ್‌ನಲ್ಲಿ ಸಹಸವಾರರಾಗಿ ಕುಳಿತು ಹೆಬ್ರಿ ಕಡೆಯಿಂದ ಸೀತಾನದಿ ಕಡೆಗೆ ಹೋಗುತ್ತಿರುವಾಗ ನಾಡ್ಪಾಲು ನೆಲ್ಲಿಕಟ್ಟೆ ಕ್ರಾಸ್ ಬಳಿ ಘಟನೆ ನಡೆದಿದೆ. ಬೈಕ್ ಚಲಾಯಿಸುತಿದ್ದ ಬಶಿತ್, ತಿರುವಿನಲ್ಲಿ ಒಮ್ಮೆಗೇ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲ್ ಸ್ಕಿಡ್ ಆಗಿ ಇಬ್ಬರೂ ನೆಲಕ್ಕುರುಳಿದರು ಎಂದು ತಿಳಿದುಬಂದಿದೆ.
ಇದರಿಂದ ಬಶಿತ್ ಗಾಯಗಳೊಂದಿಗೆ ಅಪಾಯದಿಂದ ಪಾರಾದರೆ, ಸಾರಬಿ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿ ಕೆಎಂಸಿಗೆ ಕರೆದೊಯ್ಯುವ ದಾರಿಯಲ್ಲಿ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.