×
Ad

ಉಡುಪಿ ರೈಲ್ವೆ ನಿಲ್ದಾಣದಲ್ಲಿ ಡಿಜಿ ಲಾಕರ್ ಸೌಲಭ್ಯ

Update: 2025-11-11 22:58 IST

ಉಡುಪಿ, ನ.11: ಕೊಂಕಣ ರೈಲ್ವೆಯು ಉಡುಪಿ, ಥೀವಿಂ ಹಾಗೂ ರತ್ನಗಿರಿ ರೈಲ್ವೆ ನಿಲ್ದಾಣಗಳಲ್ಲಿ ಡಿಜಿ ಲಾಕರ್ ಸೌಲಭ್ಯವನ್ನು ಕಲ್ಪಿಸಿದ್ದು, ಅದೀಗ ಪ್ರಯಾಣಿಕರಿಗೆ ಲಭ್ಯವಿದೆ. ಪ್ರಯಾಣಿಕರ ಲಗ್ಗೇಜ್ಗಳ ಸುರಕ್ಷತೆ, ಭದ್ರತೆ ಹಾಗೂ ಅವರ ಆತಂಕವನ್ನು ಇದು ನಿವಾರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಡಿಜಿ ಲಾಕರ್ ಸೌಲಭ್ಯದ ಮೂಲಕ ಆಧುನಿಕ, ಸುರಕ್ಷಿತ ಹಾಗೂ ತಾವೇ ಕಾರ್ಯಾಚರಿಸುವ ಅವಕಾಶವೂ ಪ್ರಯಾಣಿಕರಿಗೆ ಸಿಗುವ ಮೂಲಕ ಅವರ ಲಗ್ಗೇಜ್ಗಳನ್ನು ಸುರಕ್ಷಿತವಾಗಿರಿಸುವ ಸಮಸ್ಯೆ ಬಗೆಹರಿಯಲಿದೆ ಎಂದು ಅದು ಹೇಳಿದೆ.

ಪ್ರಯಾಣಿಕರು ಯುಪಿಐ ಬಳಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ನಿಂದ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯ ಮೂಲಕ ಸುರಕ್ಷಿತವಾದ ಈ ಸೇವೆಯನ್ನು ಪಡೆದುಕೊಳ್ಳಬಹುದು. ಈ ಸೇವೆ ದಿನದ 24 ಗಂಟೆಯೂ ರೈಲ್ವೆ ನಿಲ್ದಾಣದಲ್ಲಿ ಲಭ್ಯವಿರುತ್ತದೆ.

ನಿಗದಿತ ಶುಲ್ಕ ಪಾವತಿಸಿ ತಾವೇ ಕಾರ್ಯಾಚರಿಸುವ ಡಿಜಿ ಲಾಕರ್ ಸೌಲಭ್ಯವನ್ನು ದಿನದ ಯಾವುದೇ ಸಮಯದಲ್ಲಿ, ಬೇಕಾದ ಅವಧಿಗೆ ಪಡೆದುಕೊಳ್ಳಬಹುದು. ಯುಪಿಐ ಬಳಸಿ ಡಿಜಿಟಲ್ ಪೇಮೆಂಟ್ ಮೂಲಕ ಸೇವೆ ಪಡೆದು ತಮ್ಮ ಸಾಮಾನು ಸರಂಜಾಮುಗಳನ್ನು ಸುರಕ್ಷಿತವಾಗಿರಿಸಿ ತಮ್ಮ ಕೆಲಸ ಮುಗಿಸಿಕೊಂಡು ಬಂದು ಅವುಗಳನ್ನು ಕೊಂಡೊಯ್ಯಬಹುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News