ಸ್ಕೂಟರ್ ಸಹಿತ ಎಲೆಕ್ಟ್ರಿಷಿಯನ್ ನಾಪತ್ತೆ
Update: 2026-01-17 21:10 IST
ಶಿರ್ವ, ಜ.17: ಎಲೆಕ್ಟ್ರಿಷಿಯನೊಬ್ಬರು ಮನೆಯಿಂದ ಸ್ಕೂಟರ್‌ನಲ್ಲಿ ಹೋದವರು ನಾಪತ್ತೆಯಾಗಿರುವ ಘಟನೆ ಜ.13ರಂದು ಬೆಳ್ಳೆ ಗ್ರಾಮದ ಪಾಂಬೂರು ಎಂಬಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ಪಾಂಬೂರು ಮಡಿವಾಳ ತೋಟ ನಿವಾಸಿ ಸಾಧು ಸಾಲಿಯಾನ್ ಎಂಬವರ ಮಗ ಸಚಿನ್ ಎಸ್ ಸಾಲಿಯಾನ್(33) ಎಂದು ಗುರುತಿಸಲಾಗಿದೆ. ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಇವರು, ಮನೆಯಿಂದ ತನ್ನ ಸ್ಕೂಟರ್‌ನಲ್ಲಿ ಹೋದವರು ಕೆಲಸಕ್ಕೂ ಹೋಗದೆ ವಾಪಾಸ್ಸು ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.