×
Ad

ಪ್ರತ್ಯೇಕ ಪ್ರಕರಣ: ನಾಲ್ವರು ಆತ್ಮಹತ್ಯೆ

Update: 2026-01-17 21:03 IST

ಅಜೆಕಾರು, ಜ.17: ಪತ್ನಿಯ ಮರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅಜೆಕಾರು ನಿವಾಸಿ ದೇವರಾಯ ಹೆಗ್ಡೆ(80) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಜ.15ರಂದು ರಾತ್ರಿ ಮನೆಯ ಹಿಂಬದಿಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಂದೂರು: ವೈಯಕ್ತಿಕ ಕಾರಣದಿಂದ ಮನನೊಂದ ಯಳಜಿತ ಗ್ರಾಮದ ಕಾಂಬ್ಳಿಕೇರಿ ನಿವಾಸಿ ಚಂದು(85) ಎಂಬವರು ಜ.14ರ ಬೆಳಗ್ಗೆಯಿಂದ ಜ.16ರ ಮಧ್ಯಾಹ್ನದ ಮಧ್ಯಾವಧಿಯಲ್ಲಿ ಮನೆ ಸಮೀಪದ ಹೊಲದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರಿ: ಅನಾರೋಗ್ಯದಿಂದ ಮಾನಸಿಕವಾಗಿ ನೊಂದು ಜ.8ರಂದು ರಾತ್ರಿ ಮನೆಯ ಜಗಲಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹೆಜಮಾಡಿ ಗ್ರಾಮದ ಪಡುಕೆರೆ ನಿವಾಸಿ ಗಣೇಶ್(48) ಎಂಬವರು ತೀವ್ರವಾಗಿ ಅಸ್ವಸ್ಥ ಗೊಂಡು ಜ.16ರಂದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು: ಮದ್ಯ ಸೇವನೆ ಚಟದಿಂದ ಹೊಟ್ಟೆನೋವು ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬಾಗಲಕೋಟೆ ಮೂಲದ ಪ್ರಕಾಶ ಎಂಬವರು ತಾನು ಮನೆ ಕೆಲಸ ಮಾಡಿಕೊಂಡಿದ್ದ ಮಣಿಪುರ ಗ್ರಾಮದ ಸಖರಾಮ ಶೆಟ್ಟಿ ಎಂಬ ವರ ಜಾಗದಲ್ಲಿರುವ ಬಾವಿಗೆ ಜ.16ರಂದು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News