ವರ್ಷಕ್ಕೊಂದು ಬಾರಿ ಕಣ್ಣಿನ ತಪಾಸಣೆ ಅಗತ್ಯ: ಡಾ.ಸುಲತಾ ಭಂಡಾರಿ
Update: 2023-07-30 20:30 IST
ಉಡುಪಿ, ಜು.30: ಪ್ರತಿಯೊಬ್ಬ ಹಿರಿಯ ನಾಗರಿಕರು ವರ್ಷಕ್ಕೊಂದು ಬಾರಿ ಕಣ್ಣಿನ ಸಂಪೂರ್ಣ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ನೇತ್ರತ್ರಜ್ಞೆ ಡಾ.ಸುಲತಾ ಭಂಡಾರಿ ತಿಳಿಸಿದ್ದಾರೆ.
ರೋಟರಿ ಮಣಿಪಾಲ ಹಿಲ್ಸ್ ಹಾಗೂ ಮಣಿಪಾಲದ ಹಿರಿಯ ನಾಗರಿಕರ ಒಕ್ಕೂಟದ ಜಂಟಿ ಆಶ್ರಯದಲ್ಲಿ ಮಣಿಪಾಲ ಮಣ್ಣಪಳ್ಳದಲ್ಲಿರುವ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾದ ಹಿರಿಯರಲ್ಲಿ ಕಣ್ಣಿನ ಸಮಸ್ಯೆಗಳು ಹಾಗೂ ಚಿಕಿತ್ಸೆ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ರೋಟರಿ ಮಣಿಪಾಲ ಹಿಲ್ಸ್‌ನ ಅಧ್ಯಕ್ಷ ರಮಾನಂದ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಮಾಧವ ಮಯ್ಯ ವಂದಿಸಿದರು. ಎಸ್.ಎಸ್.ಕಾರಂತ್ ಉಪಸ್ಥಿತರಿದ್ದರು. ಶ್ರೀರಾಮ್ ಕಾರ್ಯಕ್ರಮ ನಿರೂಪಿಸಿದರು.