×
Ad

ಕಾರ್ಕಳ | ಜಿಲ್ಲಾ ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷರಾಗಿ ಗಂಗಾಧರ ಗೌಡ ಪುನರಾಯ್ಕೆ

Update: 2025-07-02 13:01 IST

ಕಾರ್ಕಳ : ಜಿಲ್ಲಾ ಮಲೆಕುಡಿಯ ಸಂಘ (ರಿ.), ಉಡುಪಿ ಇದರ 2025 -28ರ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನಡೆಯಿತು.

ಈ ವೇಳೆ ಆಡಳಿತ ಮಂಡಳಿಯ ಪುನಾರಚನೆ ನಡೆಯಿತು. ಜಿಲ್ಲಾಧ್ಯಕ್ಷರಾಗಿ ಗಂಗಾಧರ ಗೌಡ ಅವರು ಪುನರಾಯ್ಕೆಯಾದರು.  

ಉಪಾಧ್ಯಕ್ಷರಾಗಿ ಶಾರದಾ ಪೇರಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಕೆರ್ವಾಶೆ, ಸಹ ಕಾರ್ಯದರ್ಶಿಯಾಗಿ ಚಾಂದಿನಿ ಶಿರ್ಲಾಲು, ಕೋಶಾಧಿಕಾರಿಯಾಗಿ ಸುಂದರಿ ಪೇರಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಅಜಿತ್ ಅಂಡಾರು, ಸಹ ಸಂಘಟನಾ ಕಾರ್ಯದರ್ಶಿಯಾಗಿ ಶಶಿಧರ ಕಬ್ಬಿನಾಲೆ, ವಕ್ತಾರರಾಗಿ ದಿನೇಶ್ ಗೌಡ ನೂರಾಳ್ ಬೆಟ್ಟು, ಸಹ ವಕ್ತಾರೆಯಾಗಿ ಸುಜಾತ ಕಬ್ಬಿನಾಲೆ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News