×
Ad

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಸಿವು ಮುಕ್ತ ದಿನಾಚರಣೆ

Update: 2025-05-28 20:54 IST

ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಹಸಿವು ಮುಕ್ತ ದಿನಾಚರಣೆಯನ್ನು ನಗರಸಭೆ ಉಪಾಧ್ಯಕ್ಷರಾದ ರಜನಿ ಹೆಬ್ಬಾರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ಲಕ್ಷಾಂತರ ಜನ ಒಂದು ಹೊತ್ತು ಊಟಕ್ಕಿಲ್ಲದವರು ನಮ್ಮ ದೇಶದಲ್ಲಿ ಇದ್ದಾರೆ. ಇಂತಹವರ ಹಸಿವು ನೀಗಿಸುವುದು ಬಹಳ ದೊಡ್ಡ ಪುಣ್ಯದ ಕೆಲಸ. ಅಂತಹ ಸಮಾಜಮುಖಿ ಕಾರ್ಯವನ್ನು ಮಲಬಾರ್ ಗೋಲ್ಡ್ ಮಾಡುತ್ತಿರುವುದು ಎಲ್ಲರಿಗೂ ಮಾದರಿ ಎನಿಸಿದೆ ಎಂದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಸೋಪ್ ಮತ್ತು ಮಾರ್ಜಕದ ಮಾಜಿ ಅಧ್ಯಕ್ಷೆ ವೆರೋನಿಕಾ ಕರ್ನೆಲಿನೋ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಅಲೆವೂರು ರಾಜೇಶ್ ಶೆಟ್ಟಿ, ನಾಗರಿಕ ಸೇವಾ ಸಮಿತಿ ಅಧ್ಯಕ್ಷ ನಿತ್ಯಾನಂದ ಒಳಕಾಡು, ಸಾಮಾಜಿಕ ಸೇವಕರಾದ ಝಹೀರ್ ಅಹ್ಮದ್ ಬೆಳಪು ಮಾತನಾಡಿದರು.

ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಮಲಬಾರ್ ಚಾರಿಟೇಬಲ್ ಟ್ರಸ್ಟ್‌ನ ಸಾಮಾಜಿಕ ಸೇವಾ ಕಾರ್ಯದ ಕುರಿತು ವಿವರಿಸಿದರು. ವಿದ್ಯಾ ಸರಸ್ವತಿ ಅವರು ಹಸಿವಿನ ಕುರಿತಂತೆ ಮಾತನಾಡಿದರು. ಆಹಾರ ಪೊಟ್ಟಣಗಳನ್ನು ದಾನವಾಗಿ ನೀಡಿದ ದಾನಿಗಳಿಗೆ ಗುರುತಿಸಿ ಸನ್ಮಾನಿಸಲಾಯಿತು.

ಶಾಖಾ ವ್ಯವಸ್ಥಾಪಕ ಮುಸ್ತಫಾ, ಗುರುರಾಜ್, ಸಂದೀಪ್ ಸಪಾಳ್ಯ ಮಾರುಕಟ್ಟೆ ವ್ಯವಸ್ಥಾಪಕ ತಂಝಿಮ್ ಶಿರ್ವ ಉಪಸ್ಥಿತರಿದ್ದರು. ವಿಘ್ನೇಶ್ ಸ್ವಾಗತಿಸಿದರೆ, ದಯಾನಂದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News