×
Ad

ಜನಪದ ಸರಣಿ ಕಲಾ ಕಾರ್ಯಾಗಾರ ಉದ್ಘಾಟನೆ

Update: 2023-10-14 20:01 IST

ಉಡುಪಿ, ಅ.14: ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಬಾಸ ಗ್ಯಾಲರಿ ಮತ್ತು ಸ್ಟುಡಿ ಯೋ ಉಡುಪಿಯ ವೆಂಟನಾ ಫೌಂಡೇಶನ್‌ನ ಸಹಯೋಗದಲ್ಲಿ ನಗರದ ಬಡಗುಪೇಟೆಯಲ್ಲಿನ ಗ್ಯಾಲರಿಯಲ್ಲಿ ಆಯೋಜಿಸಲಾದ ಜನಪದ ಸರಣಿ ಕಲಾ ಕಾರ್ಯಾಗಾರದ ಏಳನೇ ಆವೃತ್ತಿಯನ್ನು ವೆಂಟನಾ ಫೌಂಡೇಶನ್‌ನ ಟ್ರಸಿ ಶಿಲ್ಪಾ ಭಟ್ ಇಂದು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಉಡುಪಿಯ ಕಲಾಪ್ರೇಮಿಗಳಿಗೆ ಈ ತೆರನಾದ ಕಾರ್ಯಾಗಾರಗಳು ಬಹು ಉಪಯುಕ್ತ ವಾಗಲಿದ್ದು, ಭಾರತೀಯ ದೇಶೀಯ ಕಲೆಯ ಉಳಿಸುವಿಕೆ ಹಾಗೂ ಬೆಳೆಸುವಿಕೆಯಲ್ಲಿ ಇದೊಂದು ಮೈಲಿಗಲ್ಲಾಗ ಬಹುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಯುವ ಉದ್ಯಮಿ ಅಜಯ್ ಪಿ.ಶೆಟ್ಟಿ ಮಾತನಾಡಿ, ಭಾರತವು ಹಲವಾರು ವೈವಿಧ್ಯಮಯ ಆಚಾರ- ವಿಚಾರ, ಸಂಸ್ಕೃತಿಗಳಿಂದ ಕೂಡಿದ್ದು, ಇವುಗಳ ನಡುವೆ ಹಂಚಿಹೋಗಿರುವ ಕಲಾ ಪ್ರಕಾರಗಳನ್ನೆಲ್ಲ ಉಡುಪಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ ಇದರ ಪ್ರಯೋಜನವನ್ನು ಕರಾವಳಿಯ ಜನರು ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಭಾವನಾ ಪ್ರತಿಷ್ಠಾನದ ನಿರ್ದೇಶಕ ಹಾವಂಜೆ ಮಂಜು ನಾಥ ರಾವ್ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಯೋಜಕ ಡಾ.ಜನಾರ್ದನ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

ಸರಣಿ ಕಲಾ ಕಾರ್ಯಾಗಾರದ ಬಾಗವಾಗಿ ಕೇರಳದ ಭಿತ್ತಿ ಚಿತ್ರಕಲೆಯನ್ನು ತ್ರಿಶೂರ್‌ನ ವೇಣುಗೋಪಾಲ್‌ ಟಿ.ಕೆ. ನಡೆಸಿ ಕೊಟ್ಟರು. ಇದೇ ಸಂದರ್ದಲ್ಲಿ ಡಿವೈನ್ ಕೇರಳ ಎಂಬ ಕೇರಳ ಮ್ಯೂರಲ್ ಚಿತ್ರಗಳ ಕಲಾಪ್ರದರ್ಶನವನ್ನೂ ಏರ್ಪಡಿಸಿದ್ದು, ಎರ್ನಾಕುಲಂನ ಅಶ್ವತಿ ಎನ್. ಹಾಗೂ ವೇಣುಗೋಪಾಲ್ ಅವರ ಸುಮಾರು 15 ಜಲವರ್ಣ ಮತ್ತು ಆಕ್ರಿಲಿಕ್ ಮಾಧ್ಯಮದ ಕಲಾಕೃತಿಗಳ ಪ್ರದರ್ಶನವು ಅ.15ರ ತನಕ ಅಪರಾಹ್ನ 3ರಿಂದ 7ರ ತನಕ ಲಭ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News