×
Ad

ಬಡವರಿಗೆ ಮಾನವೀಯ ನೆಲೆಯಲ್ಲಿ ಅವಕಾಶ ಕಲ್ಪಿಸುವುದು ಅಗತ್ಯ: ಡಿವೈಎಸ್ಪಿ ಬೆಳ್ಳಿಯಪ್ಪ

Update: 2023-10-05 17:23 IST

ಕುಂದಾಪುರ, ಅ.5: ಕೆಲವೊಂದು ಕಾನೂನಿನ ಕಠಿಣವಾದ ಅಂಶಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಹಲವು ಬಡ ಕುಟುಂಬಗಳು ಮೂಲ ಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಆದರೆ ಕೆಲವು ಬಾರಿ ಅಧಿಕಾರಿಗಳು ಕಾನೂನಿನ ಅಂಶಗಳನ್ನು ಬದಿಗಿಟ್ಟು ಮಾನವೀಯ ನೆಲೆಯಲ್ಲಿ ಅವಕಾಶಗಳನ್ನು ಕಲ್ಪಿಸುವ ಕಾರ್ಯ ಮಾಡಬೇಕಾಗುತ್ತದೆ ಎಂದು ಕುಂದಾಪುರ ಪೋಲಿಸ್ ಉಪಾಧಿಕ್ಷಕ ಬೆಳ್ಳಿಯಪ್ಪ ಹೇಳಿದ್ದಾರೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಯಡಮೊಗ್ಗೆ ಗ್ರಾಮ ಶಾಖೆ ವತಿಯಿಂದ ಯಡಮೊಗ್ಗೆ ಕೊಳಾಳಿ ಸಿದ್ದಿ ವಿನಾಯಕ ಭಜನಾ ಮಂದಿರದ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಭೂಮಿ ಹಕ್ಕು ಸಮಸ್ಯೆಗಳ ವಿಚಾರ ಗೋಷ್ಠಿ ‘ಜನಸಂಕಲ್ಪ’ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿ ದ್ದರು.

ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಕುಂದಾಪುರ ತಹಶಿಲ್ದಾರ್ ಶೋಭಾಲಕ್ಷ್ಮೀ, ಕಂದಾಯ ಇಲಾಖೆಯನ್ನು ಮಾತೃ ಇಲಾಖೆ ಎಂದು ಕರೆಯಲಾಗುತ್ತದೆ. ಒಂದು ಮಗು ಹುಟ್ಟಿದಾಗ ಜನನ ಪ್ರಮಾಣದಿಂದ ಪ್ರಾರಂಭವಾದ ಇಲಾಖೆಯೊಂದಿನ ಸಂಬಂಧ ಜೀವನದುದ್ದಕ್ಕೂ ಮಾತೃ ಸಂಭದ ವಾಗಿ ಇರಲಿದೆ. ಸರಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ಜನರಿಗೆ ತಲುಪಿಸಲು ಸಾಮಾಜಿಕ ಸಂಘಟನೆ ಗಳು ಇಲಾಖೆಯೊಂದಿಗೆ ಕೈ ಜೋಡಿಸಿದಲ್ಲಿ ಅನುಕೂಲವಾಗುತ್ತದೆ ಎಂದರು.

ದಸಂಸ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರು ಮಾತನಾಡಿ, ಸಾಮಾಜಿಕ ಸಾಮರಸ್ಯವನ್ನು ಬಯಸಿದ ಅಂಬೇಡ್ಕರ್ ಎಂದೂ ಕೂಡ ಇತರರ ಹಕ್ಕನ್ನು ಚ್ಯುತಿಗೊಳಿಸಿದವರಲ್ಲ. ವಿವಿಧತೆಯಲ್ಲಿ ಏಕತೆಯನ್ನು ಬಯಸಿ ದ್ದರು. ಅವರ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡಲ್ಲಿ ಸಹೋದರತೆಯ ಸಾಮರಸ್ಯದ ಬದುಕು ಸಾಧ್ಯ. ಇಂದಿನ ಯುವ ಪೀಳಿಗೆ ಇದನ್ನು ಅನುಸರಿಸಬೇಕು ಎಂದು ಹೇಳಿದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಹಾಗೂ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ವಾಸು ದೇವ ಮುದೂರು ಮಾತನಾಡಿ, ಗ್ರಾಮೀಣ ಭಾಗದಿಂದ ಸಂಘಟನೆಗೆ ಬರುವವರು ಕೆಲವು ಹಕ್ಕುಗಳನ್ನು ಪಡೆಯಲು ನಿರೀಕ್ಷೆಗಳನ್ನಿಟ್ಟು ಬರುತ್ತಾರೆ. ಅವರಿಗೆ ಚಳುವಳಿಯ ರೂಪುರೇಷೆ ಬಗ್ಗೆ ಅರಿವು ಇರುವುದಿಲ್ಲ. ಅಂತವರಿಗೆ ಸಂವಿಧಾನಬದ್ದ ಹಕ್ಕುಗಳನ್ನು ಒದಗಿ ಸುವುದರೊಂದಿಗೆ ಚಳುವಳಿಗೆ ರೂಪ ಕೊಟ್ಟು ಸಂಘಟನೆ ಬಲಪಡಿಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆಯನ್ನು ಸಂಚಾಲಕ ಭಾಸ್ಕರ ನಾಯ್ಕ ರಾಂಪೈಜೆಡ್ಡು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಪಿಡಬ್ಲ್ಯುಡಿ ಗುತ್ತಿಗೆದಾರರಾದ ಸುರೇಶ್ ಹಕ್ಲಾಡಿ, ಸುರೇಶ್ ಮೂಡುಬಗೆ, ಯಡಮೊಗ್ಗೆ ಗ್ರಾಪಂ ಅಧ್ಯಕ್ಷೆ ಸುಮತಿ ಗಾಣಿಗ ಉಪಸ್ಥಿತರಿದ್ದರು.

ಸಮಾಜ ಸೇವಕರಾದ ಶೇಖರ ಪೂಜಾರಿ ಹಲವರಿಮಠ, ಪೂಜಾ ಜಂಬೆಹಾಡಿ ಅವರನ್ನು ಸನ್ಮಾನಿಸಲಾಯಿತು. ಗಣೇಶ ಯಡಮೊಗ್ಗೆ ಸ್ವಾಗತಿಸಿದರು. ಉದಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News