×
Ad

ಕಾರ್ಕಳ: ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2023-08-15 13:41 IST

ಕಾರ್ಕಳ: ಹಯಾತುಲ್ ಇಸ್ಲಾಂ ಅಸೋಸಿಯೇಷನ್(ರಿ ) ಬಂಗ್ಲೆಗುಡ್ಡೆ, ಸರ್ ಹಿಂದ್ ಇಸ್ಲಾಮಿಕ್ ಅಕಾಡೆಮಿ, ಸಲ್ಮಾನ್ ಜುಮ್ಮಾ ಮಸೀದಿ ಆಶ್ರಯದಲ್ಲಿ ಬಂಗ್ಲೆಗುಡ್ಡೆ ಜಾಮಿಯಾ ಮಸೀದಿ ಆವರಣದಲ್ಲಿ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಹಾಗೂ ಸ್ಥಳೀಯ ಉದ್ಯಮಿ ರಜಬ್ ಏ ಕೆ ರವರು ಧ್ವಜಾರೋಹಣ ನೆರವೇರಿದರು.

 ಈ ಸಂದರ್ಭದಲ್ಲಿ ಸರ್ ಹಿಂದ್ ಇಸ್ಲಾಮಿಕ್ ಅಕಾಡೆಮಿ ಪ್ರಾಂಶುಪಾಲ ಅಹ್ಮದ್ ಶರೀಫ್ ಸಹದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ಥಳೀಯ ಮುಸ್ಲಿಮ್ ಮುಖಂಡರಾದ ರಜಬ್ ಪರನೀರು, ಕೆ ನೂರುದ್ದಿನ್, ಎಸ್ ವೈ ಎಸ್ ಮುಖಂಡರಾದ ರಫೀಕ್, ದಾವುದ್, ಎಸ್ ಎಸ್ ಎಫ್ ಮುಖಂಡರಾದ ಅಲ್ತಾಫ್  ಹಾಗೂ ಇನ್ನಿತರ ಉಲಮಾ ಉಮರಾಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News