×
Ad

ಕಾರ್ಕಳ: ರಿಕ್ಷಾ ಪಲ್ಟಿ; ಚಾಲಕನಿಗೆ ಗಾಯ‌

Update: 2024-01-03 15:34 IST

ಕಾರ್ಕಳ: ರಿಕ್ಷಾ ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಆನೆಕೆರೆ ದಾನಶಾಲೆ ರಸ್ತೆಯಲ್ಲಿ ಬುಧವಾರ ನಡೆದಿದೆ.

ಕಾರ್ಕಳದಿಂದ ಆನೆಕೆರೆ ರಸ್ತೆಯಾಗಿ ಖಾಸಗಿ ಬಸ್ಸೊಂದು ಸಾಗುತ್ತಿದ್ದು ಮುಂಭಾಗದಲ್ಲಿ ಬರುತ್ತಿದ್ದ ರಿಕ್ಷಾ, ಚಾಲಕನ ನಿಯಂತ್ರಣ ತಪ್ಪಿ ತೀರ ಬಲಭಾಗಕ್ಕೆ ಬಂದು ಮನೆಯೊಂದರ ಕಂಪೌಂಡ್‌ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ.

ಘಟನೆಯಿಂದಾಗಿ  ರಿಕ್ಷಾ ಚಾಲಕನ ಎರಡೂ ಕಾಲುಗಳಿಗೂ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News