×
Ad

ಕಾರ್ಕಳ: ಸ್ವಚ್ಛ ಭಾರತ್ ಶ್ರಮದಾನ ಕಾರ್ಯಕ್ರಮ

Update: 2025-11-19 12:50 IST

 ಕಾರ್ಕಳ : ಪರಿಸರವನ್ನು ಸಂರಕ್ಷಣೆ ಮಾಡಿ ಸ್ವಚ್ಛ ಸುಂದರ ಪರಿಸರ ನಿರ್ಮಾಣದ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು ಎಂದು ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಜಯರಾಮ ಪ್ರಭು ಹೇಳಿದರು.

ಅವರು ವಿಶ್ವಕರ್ಮ ಸಹಕಾರ ಬ್ಯಾಂಕ್ ಕಾರ್ಕಳ ಇದರ ವತಿಯಿಂದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಹಮ್ಮಿಕೊಂಡ ಸ್ವಚ್ಛತಾ ಹೀ ಸೇವಾ ಧ್ಯೇಯದೊಂದಿಗೆ ನಡೆದ ಸ್ವಚ್ಛ ಭಾರತ್ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡುತ್ತಾ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯನ್ನು ಜಾಗೃತಗೊಳಿಸುವಲ್ಲಿ ವಿಶ್ವಕರ್ಮ ಸಹಕಾರಿ ಬ್ಯಾಂಕ್ ಹಮ್ಮಿಕೊಂಡ ಈ ಕಾರ್ಯಕ್ರಮವು ಪ್ರಶಂಸನೀಯ ಎಂದರು.

ವಿಶ್ವಕರ್ಮ ಬ್ಯಾಂಕಿನ ಉಪಾಧ್ಯಕ್ಷರಾದ ಜಗದೀಶ್ ಆಚಾರ್ಯ ಪಡುಪಣಂಬೂರು, ನಿರ್ದೇಶಕರಾದ ಭರತ್ ನಿಡ್ಪಳ್ಳಿ ಮತ್ತು ಬಿಜು ಜಯ ,ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಅಧ್ಯಕ್ಷ ಗೋಪಾಲ್ ಅಂಚನ್, ಸ್ಥಾಪಕ ಅಧ್ಯಕ್ಷೆ ಜ್ಯೋತಿ ರಮೇಶ್ ಹಾಗೂ ಸದಸ್ಯರು, ರೋಟರಿ ಕ್ಲಬ್ಬಿನ ಕಾರ್ಯದರ್ಶಿ ರೊ.ಚೇತನ್ ನಾಯಕ್, ರೊ.ಶೇಖರ್ H, ರೊ. ಅಂತೋನಿ ಎಲಿಯಾಸ್, ರೊ.ಇಕ್ಬಲ್ ಅಹ್ಮದ್, ರೊ.ವಿಜೇಂದ್ರ ಕುಮಾರ್ ಮತ್ತು ಪುರಸಭಾ ಸದಸ್ಯರೂ ವಿಶ್ವಕರ್ಮ ಮಹಿಳಾ ಮಂಡಳಿ ಕಾರ್ಕಳ ಇದರ ಅಧ್ಯಕ್ಷೆ ನಳಿನಿ ವಿಜಯೇಂದ್ರ ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಫೆಲಿಕ್ಸ್ ವಾಜ್ ಮತ್ತು ಸದಸ್ಯರು, ಶ್ರೀ ಭುವನೇಂದ್ರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಾರಾಯಣ್ ಶೆಣೈ,ವೆಂಕಟರಮಣ ಮಹಿಳಾ ಕಾಲೇಜಿನ ಮುಖ್ಯಸ್ಥೆ ಗೀತಾ ಜಿ, ಧಾರ್ಮಿಕ ಕಾರ್ಯಕರ್ತರಾದ ಹರೀಶ್ ಆಚಾರ್ಯ, ಸತೀಶ್ ಆಚಾರ್ಯ, ಮತ್ತು ಪ್ರಾಚಾರ್ಯ ರೊ. ಶಂಕರ್ ಕುಡ್ವ ನೇತೃತ್ವದ ಭುವನೆಂದ್ರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿಗಳು, ಕಾರ್ಕಳ ಟೈಗರ್ಸನ ಸದಸ್ಯರು ಭಾಗವಹಿಸಿದ್ದರು.

ಕಾರ್ಕಳ ವೆಂಕಟರಮಣ ದೇವಸ್ಥಾನದಿಂದ ಮಾರ್ಕೆಟ್ ಮೂಲಕ ಬಸ್ ನಿಲ್ದಾಣದ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಯಿತು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News