ಮಲ್ಪೆ: ವಾಹನ ಸಹಿತ ಚಾಲಕ ನಾಪತ್ತೆ
Update: 2025-11-17 23:23 IST
ಮಲ್ಪೆ: ಚಾಲಕನೋರ್ವ ವಾಹನ ಸಹಿತ ನಾಪತ್ತೆಯಾಗಿರುವ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ.
ಬ್ರಹ್ಮಾವರ ಕೋಡಿ ಗ್ರಾಮದ ತಿರ್ಥೇಶ್ ಎಂಬವರು 2 ತಿಂಗಳ ಹಿಂದೆ ಕೆಎ 47 ಎ 2766 ನಂಬರಿನ ಅಶೋಕ್ ಲೈಲಾಂಡ್ ಬಾಡಾ ದೋಸ್ತ್ ವಾಹನವನ್ನು ಖರೀದಿಸಿದ್ದು ವಾಹನಕ್ಕೆ ಚಿಕ್ಕಮಂಗಳೂರಿನ ಕಯುಂ ಪಾಷಾ ಎಂಬಾತನನ್ನು ಚಾಲಕನಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದರು.
ನ.15ರಂದು ಸಂಜೆ ವಾಹನವನ್ನು ಮಲ್ಪೆ ಬಂದರಿನ ಬಳಿ ಇರುವ ಮತ್ಸ್ಯ ಸಿರಿ ಕಾಂಪ್ಲೆಕ್ಸ್ ಎದುರು ನಿಲ್ಲಿಸಿದ ತೀರ್ಥೆಶ್, ವಾಹನದ ಬೀಗವನ್ನು ಕಯುಂ ಪಾಷಾನಿಗೆ ಕೊಟ್ಟು ಅಲ್ಲಿಂದ ಹೋಗಿದ್ದರು. ನ.16ರಂದು ಬೆಳಗ್ಗೆ ಬಂದು ನೋಡಿದಾಗ ಚಾಲಕ ವಾಹನ ಸಹಿತ ನಾಪತ್ತೆಯಾಗಿರುವುದು ಕಂಡುಬಂತು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.