×
Ad

ಮಂಗಳೂರು ವಿವಿ ಅತ್ಲೆಟಿಕ್ : ಆಳ್ವಾಸ್ ಮೂಡಬಿದರೆಯ ಪ್ರಥಮೇಶ್, ರೇಖಾಗೆ 800 ಮೀ.ನಲ್ಲಿ ಚಿನ್ನ

ಮೊದಲ ದಿನ ಆಳ್ವಾಸ್ ತಂಡಗಳ ಮೇಲುಗೈ

Update: 2025-11-25 22:06 IST

ಸಾಂದರ್ಭಿಕ ಚಿತ್ರ

ಉಡುಪಿ, ನ.25: ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ಹಾಗೂ ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಜಂಟಿ ಆಶ್ರಯದಲ್ಲಿ ಉಡುಪಿಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಪ್ರಾರಂಭಗೊಂಡ 45ನೇ ಮಂಗಳೂರು ವಿವಿ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಅತ್ಲೆಟಿಕ್ ಕೂಟದ 800ಮೀ. ಓಟದಲ್ಲಿ ಮೂಡಬಿದರೆ ಆಳ್ವಾಸ್ ಕಾಲೇಜಿನ ಡಿ.ಪ್ರಥಮೇಶ್ ಹಾಗೂ ರೇಖಾ ಚಿನ್ನದ ಪದಕ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ರೀಡಾಕೂಟದ ಮೊದಲ ದಿನದ ಸ್ಪರ್ಧೆಗಳ ಬಳಿಕ ಮೂಡಬಿದರೆಯ ಆಳ್ವಾಸ್ ಕಾಲೇಜು ಸ್ಪಷ್ಟ ಮೇಲುಗೈ ಪಡೆದಿದೆ. ಪುರುಷರ ವಿಭಾಗದಲ್ಲಿ ಆಳ್ವಾಸ್ ತಂಡ ಒಟ್ಟು 58 ಅಂಕ ಸಂಗ್ರಹಿಸಿದ್ದರೆ, ಎಸ್‌ಡಿಎಂ ಉಜಿರೆ ತಂಡ 20 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ 55 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಹಾಗೂ ಆತಿಥೇಯ ಡಾ.ಶಂಕರ್ ಸರಕಾರಿ ಮಹಿಳಾ ಕಾಲೇಜು 22 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿವೆ.

ಮೊದಲದ ದಿನದ ಸ್ಪರ್ಧೆಗಳ ಸಂಪೂರ್ಣ ವಿವರ :

ಪುರುಷರ ವಿಭಾಗ :

800ಮೀ.: 

1.ಡಿ.ಪ್ರಥಮೇಶ್ ಆಳ್ವಾಸ್ ಮೂಡಬಿದರೆ (1:51.50ಸೆ.), 2.ಯಶವಂತ್ ಆಳ್ವಾಸ್, 3.ಆಶ್ಲೇಷ ಕೆ. ಎಸ್‌ಡಿಎಂ ಉಜಿರೆ.

5,000ಮೀ. : 

1. ಅದೇಶಕುಮಾರ್ ಆಳ್ವಾಸ್ ಮೂಡಬಿದರೆ (14:38.4ಸೆ.), 2.ಹರೇಂದ್ರ ಸಿಂಗ್ ಆಳ್ವಾಸ್, 3.ನಿತಿನ್ ಯು.ಎಲ್. ಎಸ್‌ಡಿಎಂ ಉಜಿರೆ.

20ಕಿ.ಮೀ.ನಡಿಗೆ :

1.ದರ್ಶನ್ ಆಳ್ವಾಸ್ ಮೂಡಬಿದರೆ (1:52:12.02ಸೆ.), 2.ಅಭಿಲಾಷ್, ಶ್ರೀಭುವನೇಂದ್ರ ಕಾಲೇಜು ಕಾರ್ಕಳ, 3. ಶ್ರೇಯಸ್ ಶೆಟ್ಟಿ ಭುವನೇಂದ್ರ ಕಾಲೇಜು ಕಾರ್ಕಳ.

ಹಾಫ್ ಮ್ಯಾರಥಾನ್ :

1.ಯಶ ಕುಮಾರ್, ಆಳ್ವಾಸ್ ಮೂಡಬಿದರೆ (1:19:37.52ಸೆ.), 2.ಮೋಹಿತ್ ಚೌಧುರಿ ಆಳ್ವಾಸ್, 3. ಶುಭಂ ಬಲ್ಯಾಮ ಆಳ್ವಾಸ್ ಮೂಡಬಿದರೆ.

ಸ್ಟೀಪಲ್ ಚೇಸ್ :

1.ರೋಹಿತ್ ಸಂಜೀವ್ ಝಾ ಆಳ್ವಾಸ್ ಮೂಡಬಿದರೆ (09:29.02ಸೆ.), 2.ಮಿಥೇಶ್ ಜಿ. ಎಸ್‌ಡಿಎಂ ಉಜಿರೆ, 3. ಆದಿತ್ಯ ಎಸ್‌ಡಿಎಂ ಉಜಿರೆ.

ಮಹಿಳೆಯರ ವಿಭಾಗ :

800ಮೀ. :

1.ರೇಖಾ ಆಳ್ವಾಸ್ ಮೂಡಬಿದರೆ (2:13.2ಸೆ.), 2.ಪ್ರಣಮ್ಯ ಆಳ್ವಾಸ್, 3.ತನು ಕೆ.ಸಿ.ಹೆಗ್ಡೆ ಎಸ್‌ಡಿಎಂ ಉಜಿರೆ.

5,000ಮೀ. :

1. ನಿರ್ಮಲಾ ಆಳ್ವಾಸ್ ಮೂಡಬಿದರೆ (17:14.6ಸೆ.), 2,ಜ್ಯೋತಿ ಆಳ್ವಾಸ್, 3.ಜಯಶ್ರೀ ಎಸ್‌ಡಿಎಂ ಉಜಿರೆ.

20ಕಿ.ಮೀ. ನಡಿಗೆ :

1.ತನಿಯಾ ಆಳ್ವಾಸ್ ಮೂಡಬಿದರೆ ( 1:59:05.86ಸೆ), 2.ವಿದ್ಯಾ ಡಾ.ಜಿ.ಶಂಕರ್ ಮಹಿಳಾ ಕಾಲೇಜು ಉಡುಪಿ, 3. ಪ್ರಣವ್ಯ ಡಾ.ಜಿ.ಶಂಕರ್ ಮಹಿಳಾ ಕಾಲೇಜು ಉಡುಪಿ.

ಟ್ರಿಪಲ್ ಜಂಪ್ :

1.ಅನುಷಾ ಎಸ್.ಎಸ್. ಮಂಗಳೂರು ವಿವಿ ಕ್ಯಾಂಪಸ್ ಮಂಗಳೂರು(9.46ಮೀ.), 2.ಅಮೃತಾ ಕೆ. ಸೈಂಟ್ ಪಿಲೋಮಿನಾ ಪುತ್ತೂರು, 3. ಮನಿಷಾ ಡಾ.ಡಿಪಿಡಿ ಪಿಎಸ್‌ಪಿ ಮಹಿಳಾ ಕಾಲೇಜು ಮಂಗಳೂರು.

ಹಾಫ್ ಮ್ಯಾರಥಾನ್ :

1.ಭಾಗೀರಥಿ ಆಳ್ವಾಸ್(1:29:25.74ಸೆ), 2.ಯಶಿ ಸಂಚನ ಆಳ್ವಾಸ್, 3.ಪ್ರತೀಕ್ಷಾ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ಉಡುಪಿ.

ಸ್ಟೀಪಲ್ ಚೇಸ್ :

1.ಮನಿಷಾ ಆಳ್ವಾಸ್ ಮೂಡಬಿದರೆ (11:26.9ಸೆ.) 2.ಸುಜಾತ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ಉಡುಪಿ, 3. ನಸ್ಮಿತಾ ಶೆಟ್ಟಿ ಜಿಎಫ್‌ಜಿಸಿಡಬ್ಲ್ಯು ಬಲ್ಮಠ ಮಂಗಳೂರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News