×
Ad

ಮಣಿಪಾಲದ ವಿದ್ಯಾರ್ಥಿಗೆ ಹಲ್ಲೆ ಪ್ರಕರಣ: ಮೂವರ ಬಂಧನ

Update: 2025-09-20 20:15 IST

ಮಣಿಪಾಲ, ಸೆ.20: ಮಣಿಪಾಲ ಕಾಲೇಜೊಂದರ ತರಗತಿಯಲ್ಲಿ ಸಹಪಾಠಿಗೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಣಿಪಾಲದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿಗಳಾದ ವಿಕ್ರಂ ವೀರ್ ಸಿಂಗ್ ರಾಜವೀರ್ ಸಿಂಗ್ ಹಾಗು ಶಾಹ್ ಕ್ರಿಶ್ ಮಾಲಾವ್ ಎಂದು ಗುರುತಿಸಲಾಗಿದೆ.

ರಾಜ್ ಗಿರೀಶ್ ಸುವರ್ಣ ಹಾಗೂ ಅವರ ಸ್ನೇಹಿತ ಸಾತ್ವಿಕ್ ಭಂಡಾರಿ ಮಣಿಪಾಲದ ಕಾಲೇಜಿನಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವಿದ್ಯಾಬ್ಯಾಸ ಮಾಡಿಕೊಂಡಿದ್ದು ಸೆ.18.ರಂದು ಬೆಳಗ್ಗೆ ತರಗತಿಯಲ್ಲಿದ್ದ ಇವರಿಗೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಮಾರಾಣಾಂತಿಕ ಹಲ್ಲೆ ಮಾಡಿರುವುದಾಗಿ ದೂರಲಾಗಿತ್ತು. ಈ ಬಗ್ಗೆ ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣ ತನಿಖೆಯಲ್ಲಿ ಆರೋಪಿಗಳು ಮಾದಕ ಪದಾರ್ಥವನ್ನು ಸೇವನೆ ಮಾಡಿರು ವುದು ದೃಢಪಟ್ಟಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News