ರಾಷ್ಟ್ರಮಟ್ಟದ ಹ್ಯಾಕೋತ್ಸವ ಸ್ಪರ್ಧೆ: ಮೈಸೂರಿನ ಜೆಎಸ್‌ಎಸ್‌ಗೆ ಪ್ರಶಸ್ತಿ
ಉಡುಪಿ: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಆಯೋಜಿಸಲಾದ ರಾಷ್ಟ್ರ ಮಟ್ಟದ 30ಗಂಟೆಗಳ ಹ್ಯಾಕಥಾನ್-ಹ್ಯಾಕೋತ್ಸವ ಸ್ಪರ್ಧೆಯಲ್ಲಿ ಮೈಸೂರಿನ ಜೆಎಸ್‌ಎಸ್ ಜ್ಞಾನ ಮತ್ತು ತಾಂತ್ರಿಕ ವಿದ್ಯಾಲಯದ ಕೋಡ್ ಫೋರ್ಜ್ ತಂಡವು 35000ರೂ. ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನ ಹಾಗೂ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಅಬ್ರಕೋಡ್ ಅಬ್ರ ತಂಡವು 25000ರೂ. ನಗದು ಬಹುಮಾನದೊಂದಿಗೆ ದ್ವಿತೀಯ ಸ್ಥಾನ ಗೆದ್ದುಕೊಂಡಿತು.
ಮೈಸೂರಿನ ಶ್ರೀಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿ ನಿಂದ ಟೆಕ್4ಗುಡ್ ತಂಡ, ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಮತ್ತು ಜೆಎಸ್‌ಎಸ್‌ಟಿ ವಿಶ್ವ ವಿದ್ಯಾಲಯದಿಂದ ನ್ಯೂರಾಟ್ರಾನ್ ತಂಡ, ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನ ಸೇಪಿಯಂಟ್ ಸ್ಕಾಲರ್ಸ್ ತಂಡ, ಮೂಡಬಿದ್ರಿಯ ಆಳ್ವಾಸ್ ಇಂಜಿನಿಯ ರಿಂಗ್ ಕಾಲೇಜಿನ ಫುಲ್‌ಸ್ಟ್ಯಾಕ್ ಆಲ್ಕೆಮಿಸ್ಟ್ ತಂಡಗಳಿಗೆ ನವೀನ ವಿನ್ಯಾಸಗಳು ಎಂಬ ವರ್ಗದಲ್ಲಿ ಪ್ರಶಸ್ತಿಯನ್ನು ನೀಡಲಾಯಿತು.
ನ.4ರಂದು ಸಂಸ್ಥೆಯ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ಬೆಂಗಳೂರಿನ ನಿಯೋಕ್ರಡ್‌ನ ತಂತ್ರಜ್ಞಾನ ವಿಭಾಗದ ಉಪಾಧ್ಯಕ್ಷ ಶಂಕರ್ ನಟೇಶ್ ಮೂರ್ತಿ ಮಾತನಾಡಿದರು. ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್ ಅಧ್ಯಕ್ಷತೆ ವಸಿದ್ದರು.
ಸೋದೆ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಧಕೃಷ್ಣ ಎಸ್.ಐತಾಳ್ ಮತ್ತು ಡೀನ್ ಡಾ.ನಾಗರಾಜ್ ಭಟ್ ಮತ್ತು ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕ ಸುಮೇದ್ ನಾವಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭ: ರಾಷ್ಟ್ರಮಟ್ಟದ 30 ಗಂಟೆಗಳ ಹ್ಯಾಕಥಾನ್ ಹ್ಯಾಕೋತ್ಸವವನ್ನು ನ.3ರಂದು ಫೆರ್ನಾಂಡಿಸ್ ಗ್ರೂಪ್‌ನ ಸಂಸ್ಥಾಪಕ ವಿಲ್ಸನ್ ಫೆರ್ನಾಂಡಿಸ್ ಉದ್ಘಾಟಿಸಿದರು.
ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಧಾಕೃಷ್ಣ ಎಸ್ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಡೀನ್ ಡಾ. ನಾಗರಾಜ್ ಭಟ್, ಕಾರ್ಯಕ್ರಮದ ಸಂಯೋಜಕ ಚಂದ್ರಶೇಖರ ರಾವ್ ಕುತ್ಯಾರ್ ಉಪಸ್ಥಿತರಿದ್ದರು. ದೇಶದ ವಿಧ ಕಾಲೇಜುಗಳಿಂದ ಸುಮಾರು 400 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.