×
Ad

ಡಾ.ಮಾಧವಿ ಭಂಡಾರಿಗೆ ವಿಶ್ವ ರಂಗಭೂಮಿ ದಿನದ ಸನ್ಮಾನ

Update: 2024-03-28 18:40 IST

ಉಡುಪಿ, ಮಾ.28: ಉಡುಪಿಯ ರಂಗಭೂಮಿ ಸಂಸ್ಥೆ, ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಗಳ ಸಹಯೋಗದೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆಯನ್ನು ಬುಧವಾರ ಸಂಜೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿತ್ತು.

ಇದೇ ಸಂದರ್ಭ ಉಡುಪಿಯ ಖ್ಯಾತ ಸಾಹಿತಿ, ಲೇಖಕಿ, ಅನುವಾದಕಿ, ಕಲಾವಿದೆ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ.ಮಾಧವಿ ಎಸ್. ಭಂಡಾರಿ ಅವರನ್ನು ರಂಗಭೂಮಿ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಟಪಾಡಿ ರಂಜನ ಕಲಾವಿದರು ಸಂಸ್ಥೆಯ ರಾಘವೇಂದ್ರ ರಾವ್ ಮಾತನಾಡಿ, ರಂಗದಲ್ಲಿ ನಟನೆ ಮಾಡುವರಿಗೆ ಮಾತ್ರ ವಿಶ್ವ ರಂಗಭೂಮಿ ದಿನದ ಆಚರಣೆ ಸೀಮಿತವಲ್ಲ. ರಂಗ ಕಲಾವಿದರು ಸಹಿತ ಈ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಎಲ್ಲರೂ ಮತ್ತು ಪ್ರೇಕ್ಷಕರು ಒಳಗೊಂಡು ಈ ದಿನವನ್ನು ಸಂಭ್ರಮಿಸಬೇಕು ಎಂದರು.

ಕಡಿಯಾಳಿ ಕಮಲಬಾಯಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುದರ್ಶನ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಂಗಭೂಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ಉಪಾಧ್ಯಕ್ಷ ರಾಜಗೋಪಾಲ್ ಬಲ್ಲಾಳ್, ವಿವೇಕಾನಂದ ಎನ್. ಉಪಸ್ಥಿತರಿದ್ದರು.

ವಿವೇಕ್ ಅವರು ರಂಗಭೂಮಿ ಸಂದೇಶ ವಾಚಿಸಿದರು. ಅಮಿತಾಂಜಲಿ ಕಿರಣ್ ಅವರು ಸಮ್ಮಾನಿತರನ್ನು ಪರಿಚಯಸಿ ದರು. ರಂಗಭೂಮಿ ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು ಸ್ವಾಗತಿಸಿ, ಪೂರ್ಣಿಮಾ ಸುರೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ರಂಗಭೂಮಿಯ ಈ ವರ್ಷದ ಹೊಸ ನಾಟಕ ‘ಸೀತಾರಾಮ ಚರಿತಾ’ವನ್ನು ಗಣೇಶ್ ಮಂದಾರ್ತಿ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News