×
Ad

ಕಾರ್ಕಳ : ಕ್ಷತ್ರಿಯ ಮರಾಠ ಸಮಾಜ ವತಿಯಿಂದ ವ್ಯಕ್ತಿತ್ವ ವಿಕಸನ ಶಿಬಿರ

Update: 2024-05-27 12:52 IST

ಕಾರ್ಕಳ :ಕ್ಷತ್ರಿಯ ಮರಾಠ ಸಮಾಜ ರಿ. ಕಾರ್ಕಳ ಇದರ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಕ್ಷತ್ರಿಯ ಮರಾಠ ಸಮಾಜದ ಅದ್ಯಕ್ಷರಾದ ಶುಭದರಾವ್ ಅದ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವನ್ನು ಕ್ಷತ್ರಿಯ ಮರಾಠ ಸಮಾಜದ ಹಿರಿಯರಾದ ಉಮೇಶ್ ರಾವ್ ಬಜಗೋಳಿ ಉದ್ಘಾಟಿಸಿದರು.

ಸಮಾಜದ 150 ವಿದ್ಯಾರ್ಥಿಗಳಿಗೆ ರೂ 1 ಲಕ್ಷದ 60 ಸಾವಿರ ವಿದ್ಯಾರ್ಥಿ ವೇತನ, ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 18 ವಿದ್ಯಾರ್ಥಿಗಳಿಗೆ ಸನ್ಮಾನ, ಮತ್ತು ಪ್ರಾಥಮಿಕ ವಿಭಾಗದ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಗಣೇಶ್ ರಾವ್ ಕವಡೆ, ಜಾನ್ ದೇವ್ ವೀಡೆ, ಗುಣಪ್ರಕಾಶ್, ಮೊದಲಾದವರು ಉಪಸ್ಥಿತರಿದ್ದರು.

ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ಯಾದಾನಿಗಳಾದ ಡಾ. ಸುಮತಿ ಪವಾರ್, ಪ್ರಕಾಶ್ ಪವಾರ್ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರ ನಡೆಸಿಕೊಟ್ಟ ಜೇಸಿ ರಾಜೇಂದ್ರ ಭಟ್ ಮೊದಲಾದವರನ್ನು ಗೌರವಿಸಲಾಯಿತು. ಶಿಕ್ಷಕರಾದ ಹರೇಂದ್ರ ರಾವ್ , ಕೃಷ್ಣ ರಾವ್  ಮಾತನಾಡಿ ಶುಭ ಹಾರೈಸಿದರು. ಮಾಜಿ ಪುರಸಬಾ ಸದಸ್ಯ ಶಿವಾಜಿ ರಾವ್ ಜಾದವ್ ಉಪಸ್ಥಿತರಿದ್ದರು.

ಹರೇಂದ್ರ ರಾವ್, ಆಶಾಲತಾ ಕಾರ್ಯಕ್ರಮವನ್ನು ನಿರೂಪಿಸಿದರು, ಕಾರ್ಯದರ್ಶಿ ಪ್ರಸನ್ನರಾವ್, ಶಿಕ್ಷಕಿ ವಿಶಾಲ ಯಶೋದರ್ ಸ್ವಾಗತಿಸಿದರು. ದಿವ್ಯಾ ಹರೇಂದ್ರ ಧನ್ಯವಾದ ಸಲ್ಲಿಸಿದರು. ದಿಶಾ ವಿದ್ಯಾರ್ಥಿಗಳ ವಿವರವನ್ನು ವಾಚಿಸಿದರು. ಗುರುಪ್ರಸಾದ್, ರಾಕೇಶ್, ದರ್ಶನ್, ಅನುಶ್ರೀ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News