ಭಾಗ್ಯಶ್ರೀಗೆ ಪಿಎಚ್‌ಡಿ ಪದವಿ
Update: 2024-05-27 19:24 IST
ಉಡುಪಿ, ಮೇ 27: ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಭಾಗ್ಯಶ್ರೀ ಮಂಡಿಸಿದ ಜಿಯೋ ಕೆಮಿಕಲ್ ಅಂಡ್ ಜಿಯೋ ಟೆಕ್ನಿಕಲ್ ಎವಾಲ್ಯೂವೇಶನ್ ಆಫ್ ಲ್ಯಾಟೆರಿಟಿಕ್ ಸಾಯಿಲ್ ಆಫ್ ಕೋಸ್ಟಲ್ ಕರ್ನಾಟಕ ಎಂಬ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲದ ಮಾಹೆ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.
ಈ ಸಂಶೋಧನೆಯು ಲ್ಯಾಟೆರೈಟ್(ಮುರಕಲ್ಲು) ಇರುವ ಭೂಮಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ನಿರ್ಮಾಣ ಕಾರ್ಯ ಯೋಜನೆಗಳಿಗೆ ಉಪಯೋಗ ವಾಗಲಿದೆ. ಈ ಸಂಶೋಧನೆಯನ್ನು ಎಂಐಟಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಭೂಗರ್ಭ ಶಾಸ್ತ್ರ ಪ್ರಾಧ್ಯಾಪಕ(ನಿವೃತ್ತ) ಡಾ.ಎಚ್.ಎನ್.ಉದಯ ಶಂಕರ್ ಮಾರ್ಗದರ್ಶನದಲ್ಲಿ ಹಾಗೂ ಪ್ರಾಧ್ಯಾಪಕ ಮುಖ್ಯಸ್ಥ ಡಾ. ಪುರುಷೋತ್ತಮ ಜಿ.ಸರ್ವದೆ ಸಹಮಾರ್ಗದರ್ಶನದಲ್ಲಿ ನಡೆಸಿದ್ದಾರೆ. ಇವರು ಕೋಡಿಬೆಂಗ್ರೆ ಗಣೇಶ್ ಕೋಟ್ಯಾನ್ ಹಾಗೂ ಭಾರತಿ ಗಣೇಶ್ ಅವರ ಪುತ್ರಿ ಹಾಗೂ ಮಹೇಶ್ ಎಸ್. ಅವರ ಪತ್ನಿ.