ರಸ್ತೆ ಬದಿಯಲ್ಲಿರುವ ಕಾಮಗಾರಿ ಸಾಮಗ್ರಿಗಳ ತೆರವಿಗೆ ಸೂಚನೆ
Update: 2024-06-24 19:11 IST
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಯಾವುದೇ ಕಟ್ಟಡ ಹಾಗೂ ರಸ್ತೆ ಕಾಮಗಾರಿಗಾಗಿ ಬಳಸುವ ಸಾಮಾಗ್ರಿಗಳನ್ನು, ಜಲ್ಲಿ, ಕಲ್ಲು, ಮಣ್ಣು, ಹೊಗೆ ಇತ್ಯಾದಿಗಳನ್ನು ಶೇಖರಿಸಲು ಅವಕಾಶವಿಲ್ಲ. ಮೇಲ್ಕಂಡ ಸಾಮಗ್ರಿಗಳನ್ನು ರಸ್ತೆ ಬದಿಯಲ್ಲಿ ದಾಸ್ತಾನು ಮಾಡುವುದರಿಂದ ನಗರದ ಸೌಂದರ್ಯಕ್ಕೆ, ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವ ಹಿನ್ನೆಲೆಯಲ್ಲಿ ಸಂಬಂಧ ಪಟ್ಟವರು ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದು ನಗರಸಭಾ ಪೌರಾಯುಕ್ತರು ತಿಳಿಸಿದ್ದಾರೆ.
ತಪ್ಪಿದ್ದಲ್ಲಿ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಕಲಂ 219(1) ರಂತೆ ಮೇಲ್ಕಂಡ ಸಾಮಗ್ರಿಗಳನ್ನು ತೆರವು ಗೊಳಿಸಲು ಹಾಗೂ ಕಲಂ 219(2)ರಂತೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.