ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಉನ್ನತೀಕರಣ: ಅರ್ಜಿ ಆಹ್ವಾನ
ಉಡುಪಿ, ಜೂ.24: ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಯಡಿ ಅಸಂಘಟಿತ ಆಹಾರ ಸಂಸ್ಕರಣಾ ಉದ್ಯಮಗಳನ್ನು ನಿಯಮಬದ್ಧ ಗೊಳಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಹೊಸ ಘಟಕ ಸ್ಥಾಪನೆಗೆ ಮತ್ತು ಚಾಲ್ತಿಯಲ್ಲಿರುವ ಆಹಾರ ಸಂಸ್ಕರಣ ಘಟಕಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಒಟ್ಟಾರೆ ಶೇ.50ರ ಸಹಾಯಧನ ಸೌಲಭ್ಯ ಲಭ್ಯವಿರುತ್ತದೆ. ಇದಕ್ಕಾಗಿ ಯೋಜನೆಯ ಫಲಾನುಭವಿ ಯಾಗಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ತೆಂಗಿನೆಣ್ಣೆ ತಯಾರಿಕೆ, ಒಣಮೀನು ತಯಾರಿಕೆ, ಬೇಕರಿ ಉತ್ಪನ್ನಗಳು, ಹಪ್ಪಳ ತಯಾರಿಕೆ, ಸಾಗರೋತ್ಪನ್ನ ಉತ್ಪನ್ನಗಳು, ಮಸಾಲ ಪದಾರ್ಥಗಳು, ಹಾಲಿನ ಉತ್ಪನ್ನಗಳು, ಪಶು ಆಹಾರ ತಯಾರಿಕೆ ಹಾಗೂ ತೆಂಗಿನ ಸಂಸ್ಕರಣಾ ಘಟಕಗಳಿಗೆ ಬೇಡಿಕೆ ಇದ್ದು, ರೈತರು ಹಾಗೂ ಉದ್ದಿಮೆದಾರರು ಈ ಯೋಜನೆಯ ನೆರವನ್ನು ಪಡೆದು ಸ್ವ-ಉದ್ಯಮವನ್ನು ಸ್ಥಾಪಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೃಷಿ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ ಅಥವಾ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಸೂರಜ್ ಶೆಟ್ಟಿ ಮೊ.ನಂ: 9019075051, ವೆಂಕಟೇಶ್ ನಾಯ್ಕ್ ಮೊ.ನಂ: 8310353519, ರೂಪಶ್ರೀ ಮೊ.ನಂ: 9606324279, ಡಾ.ರಾಜೇಶ್ ಡಿ.ಪಿ ಮೊ.ನಂ: 8453782414, ರಾಜೇಶ್ ಶಿಂಧೆ ಮೊ.ನಂ: 9620521058, ಫಜಲ್ ಮೊ.ನಂ: 9448549130 ಹಾಗೂ ಜೇಬಾ ಸೆಲ್ವಾನ್ ಮೊ.ನಂ: 9880821945 ಇವರನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.