×
Ad

ತೊಟ್ಟಂ: ಹಳೆ ಬೇರು ಹೊಸ ಚಿಗುರು ಕಾರ್ಯಕ್ರಮ

Update: 2024-06-24 19:52 IST

ಉಡುಪಿ, ಜೂ.24: ತೊಟ್ಟಂನ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ವತಿಯಿಂದ ಹಳೆ ಬೇರು ಹೊಸ ಚಿಗುರು ಎಂಬ ವಿಶಿಷ್ಟ ಕಾರ್ಯಕ್ರಮ ವನ್ನು ಇತ್ತೀಚೆಗೆ ಚರ್ಚಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ತೊಟ್ಟಂ ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ ಮಾತನಾಡಿ, ಎಲ್ಲಾ ಧರ್ಮದ ಜನರಲ್ಲಿ ಏಕತೆ ಮತ್ತು ಸೌಹಾರ್ದತೆ ಯನ್ನು ಉತ್ತೇಜಿಸುವುದು ಮತ್ತು ಬೆಳೆಸುವುದು ಈ ಕಾರ್ಯಕ್ರಮದ ಹಿಂದಿನ ಉದ್ದೇಶವಾಗಿದೆ. ಎಲ್ಲ ಧರ್ಮಗಳ ಸುಮಾರು 300 ಹಿರಿಯ ನಾಗರಿಕರು ಒಂದೇ ಸೂರಿನಡಿ ಬರುತ್ತಿರುವುದು ಕೇವಲ ಕಾರ್ಯಕ್ರಮದ ಪ್ರಯೋಜನವನ್ನು ಮಾತ್ರವಲ್ಲದೆ ಸುತ್ತಮುತ್ತಲಿನ ಶಾಂತಿ ಮತ್ತು ಐಕ್ಯತೆಯನ್ನು ಉತ್ತೇಜಿಸುವಲ್ಲಿ ಸರ್ವಧರ್ಮೀಯ ಸಮಿತಿಯು ಕೈಗೊಂಡ ಈ ಕಾರ್ಯಕ್ರಮ ತಮ್ಮ ಒಗ್ಗಟ್ಟು ಮತ್ತು ಸಹಕಾರವನ್ನು ವ್ಯಕ್ತಪಡಿಸಲು ಸಂತೋಷದಾಯಕವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ.ಹಿಲ್ಡಾ ರೊಡ್ರಿಗಸ್ ಮಾತನಾಡಿದರು. ಈ ಸಂದರ್ಭದಲ್ಲಿ ಸುಮಾರು 180 ಮಂದಿ ಸ್ಥಳೀಯ ಎಲ್ಲ ಧರ್ಮದ ನಿರ್ಗತಿಕ ಹಿರಿಯ ನಾಗರಿಕರಿಗೆ ಛತ್ರಿ ಮತ್ತು ಬೆಡ್‌ಶೀಟ್‌ಗಳನ್ನು ವಿತರಿಸ ಲಾಯಿತು.

ತೊಟ್ಟಂನ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ, ಮಲ್ಪೆ ಸಿಎಸ್ ಐ ಎಬನೇಜರ್ ಚರ್ಚಿನ ಪಾಸ್ಟರ್ ವಂ.ಎಡ್ವಿನ್ ಜೋಸೆಫ್, ಉಪಾಧ್ಯಕ್ಷರಾದ ನಕ್ವಾ ಯಾಹ್ಯ, ಆಗ್ನೆಲ್ ಫೆರ್ನಾಂಡಿಸ್, ಗ್ಲಾಡ್ಸನ್, ವಿನೋದ್, ಹಿರಿಯ ನಾಗರಿಕರಾದ ಲಲಿತಾ ಆಚಾರ್ತಿ, ನೆಲ್ಸನ್ ಅಂಚನ್, ಸಮಿತಿಯ ಕಾರ್ಯದರ್ಶಿ ಲೆಸ್ಲಿ ಆರೋಜಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News